ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ನೆರವಿನೊಂದಿಗೆ ನ್ಯಾಯಾಲಯದ ಕೊಠಡಿ ಕಿರಿದಾಗಲಿದೆ: ಸಿಜೆಐ

Last Updated 27 ಮಾರ್ಚ್ 2021, 14:51 IST
ಅಕ್ಷರ ಗಾತ್ರ

ಪಣಜಿ: ತಾಂತ್ರಿಕ ಹಸ್ತಕ್ಷೇಪದಿಂದಾಗಿ ಭವಿಷ್ಯದಲ್ಲಿ ನ್ಯಾಯಾಲಯದ ಕೊಠಡಿಗಳು ಮತ್ತು ನ್ಯಾಯಾಲಯ ಸಂಕೀರ್ಣಗಳು ಕಿರಿದಾಗಲಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಶನಿವಾರ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕವು ನ್ಯಾಯವನ್ನು ದೊರಕಿಸಿಕೊಡುವಲ್ಲಿ ಸವಾಲುಗಳನ್ನು ತಂದಿದ್ದರೂ ಕೂಡ, ನ್ಯಾಯಾಲಯದ ಕೊಠಡಿಗಳನ್ನು ಆಧುನೀಕರಿಸಲು ಇದು ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಇಲ್ಲಿಗೆ ಸಮೀಪದ ಪೊರ್ವೊರಿಮ್‌ನಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠದ ಹೊಸ ಕಟ್ಟಡವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಇತರರು ಉಪಸ್ಥಿತರಿದ್ದರು.

'ರವಿಶಂಕರ್ ಪ್ರಸಾದ್ ಅವರ ಸಚಿವಾಲಯದಿಂದಾಗಿ ಭವಿಷ್ಯದಲ್ಲಿ ಸಣ್ಣ ನ್ಯಾಯಾಲಯ ಕೊಠಡಿಗಳನ್ನು ಹೊಂದುವ ಪ್ರವೃತ್ತಿಯನ್ನು ನಾನು ನೋಡುತ್ತೇನೆ. ಇ-ಫೈಲಿಂಗ್ ಮತ್ತು ಡೇಟಾವನ್ನು ಒಳಗೊಂಡಿರುವ ಅನೇಕ ಶೇಖರಣಾ ಕೊಠಡಿಗಳು ಮತ್ತು ಪೇಪರ್‌ಗಳನ್ನು ಸಂಗ್ರಹಿಸಲು ಬೇಕಾದ ಅನೇಕ ಕೋಣೆಗಳ ಅಗತ್ಯವನ್ನು ತೆಗೆದುಹಾಕಲಿದೆ. ಇದು ಕನಿಷ್ಠ ಮಾನದಂಡಗಳಿಗೆ ಹೊಸ ಚೌಕಟ್ಟುಗಳನ್ನು ರೂಪಿಸಿದೆ ಎಂದು ಹೇಳಿದರು.

ಮೂಲಸೌಕರ್ಯಗಳ ಕುರಿತು ಚರ್ಚೆಯು ಹೆಚ್ಚಾಗಿ ಪರಿಮಾಣಾತ್ಮಕ ಭಾಗದಲ್ಲಿದೆ, ಅದು ಹೆಚ್ಚಿನ ನ್ಯಾಯಾಲಯ ಕೊಠಡಿಗಳನ್ನು ನಿರ್ಮಿಸುತ್ತಿದೆ ಎಂದು ಸಿಜೆಐ ಹೇಳಿದ್ದಾರೆ.

'ನ್ಯಾಯಾಲಯದ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸುವ ಅಗತ್ಯ ಮತ್ತು ಮಹತ್ವದ್ದಾಗಿದ್ದರೂ, ಅಸ್ತಿತ್ವದಲ್ಲಿರುವ ನ್ಯಾಯಾಲಯದ ಕೊಠಡಿಗಳನ್ನು ಆಧುನೀಕರಿಸುವತ್ತ ಬಹಳ ಕಡಿಮೆ ಒತ್ತನ್ನು ನೀಡಲಾಯಿತು. ಇಂತಹ ವೇಳೆಯಲ್ಲಿ ಸಾಂಕ್ರಾಮಿಕವು ನ್ಯಾಯ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದರೂ, ಅದು ನ್ಯಾಯಾಲಯದ ಕೋಣೆಯನ್ನು ಆಧುನೀಕರಿಸಲು ದಾರಿ ಮಾಡಿಕೊಟ್ಟಿದೆ' ಎಂದ ಅವರು, ಮುಂಬೈನ ಬಾಂಬೆ ಹೈಕೋರ್ಟ್‌ಗೆ ಹೊಸ ಕಟ್ಟಡವನ್ನು ನಿರ್ಮಿಸುವ ಅಗತ್ಯವನ್ನು ಸಿಜೆಐ ಒತ್ತಿ ಹೇಳಿದರು.

'ಬಾಂಬೆ ಹೈಕೋರ್ಟ್‌ಗೆ ಹೊಸ ಕಟ್ಟಡ ಬೇಕಾಗಿದೆ. ಬಾಂಬೆ ಹೈಕೋರ್ಟ್ ಕಟ್ಟಡವನ್ನು ಏಳು ನ್ಯಾಯಾಧೀಶರಿಗಾಗಿ ನಿರ್ಮಿಸಲಾಗಿದೆ. ಇದೀಗ 40 ಕ್ಕಿಂತ ಹೆಚ್ಚಿನ ಜನರ ವಸತಿಯನ್ನು ಹೊಂದಿದೆ. ಇದು ಅಸಾಧ್ಯ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT