ಸೋಮವಾರ, ಜನವರಿ 25, 2021
24 °C

ಕೋವಿಡ್–19: ಲಸಿಕೆ ಇಲ್ಲದಿರುವಾಗ ಕಚೇರಿಗೆ ಹೋಗಲು ಭಯ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19 ಸಾಂಕ್ರಾಮಿಕಕ್ಕೆ ಲಸಿಕೆ ಇನ್ನೂ ಲಭ್ಯವಿಲ್ಲದಿರುವ ಕಾರಣ, ದೇಶದಲ್ಲಿನ ಉದ್ಯೋಗಿಗಳ ಪೈಕಿ ಶೇಕಡ 83ರಷ್ಟು ಜನರಿಗೆ ಕಚೇರಿಗೆ ಮರಳುವುದೆಂದರೆ ಈಗಲೂ ಭಯವಿದೆ ಎಂಬುದನ್ನು ಸಮೀಕ್ಷೆಯೊಂದು ಕಂಡುಕೊಂಡಿದೆ. ಐ.ಟಿ. ಕಂಪನಿ ಅಟ್ಲಾಸಿಯನ್ ಈ ಸಮೀಕ್ಷೆ ನಡೆಸಿದೆ.

ತಾವು ಕೆಲಸ ಮಾಡುವ ಕಂಪನಿಗಳು ನೌಕರರನ್ನು ಕಚೇರಿಗೆ ಕರೆಸಿಕೊಳ್ಳಲು ಈಗಾಗಲೇ ಸೂಕ್ತ ಸಿದ್ಧತೆ ಮಾಡಿಕೊಂಡಿವೆ ಎಂಬ ನಂಬಿಕೆ ಶೇಕಡ 88ರಷ್ಟು ಉದ್ಯೋಗಿಗಳಲ್ಲಿ ಇದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ನೀಡಲು ಒಂದು ಸಾಂಕ್ರಾಮಿಕ ಎದುರಾಗಬೇಕಾಯಿತು ಎಂದು ಶೇಕಡ 78ರಷ್ಟು ಜನ ಸಿಟ್ಟು ಮಾಡಿಕೊಂಡಿದ್ದಾರೆ!

ಅಕ್ಟೋಬರ್ ತಿಂಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ‘ಈ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳು, ಈಗ ಸೃಷ್ಟಿಯಾಗಿರುವ ಸನ್ನಿವೇಶವು ಕೆಲಸದ ಸ್ವರೂಪ, ಸಂಬಂಧಗಳು ಹಾಗೂ ಕೆಲಸದಲ್ಲಿನ ಹೊಂದಾಣಿಕೆಯ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಹೇಗೆ ರೂಪಿಸಲಿದೆ ಎಂಬುದನ್ನು ತೋರಿಸಿಕೊಡುವಂತೆ ಇವೆ’ ಎಂದು ಅಟ್ಲಾಸಿಯನ್ ಕಂಪನಿಯ ಬೆಂಗಳೂರಿನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದಿನೇಶ್ ಅಜ್ಮೆರಾ ಹೇಳಿದ್ದಾರೆ.

ಸರಿಸುಮಾರು 1,400 ಜನರಿಂದ ಈ ಸಮೀಕ್ಷೆಗಾಗಿ ಮಾಹಿತಿ ಸಂಗ್ರಹಿಸಲಾಗಿದೆ. ‘ಕೋವಿಡ್–19 ಪೂರ್ವದ ಸ್ಥಿತಿಗೆ ಹೋಲಿಕೆ ಮಾಡಿದರೆ, ತಮ್ಮ ಉದ್ಯೋಗವು ಈಗ ಹೆಚ್ಚು ಸುಭದ್ರ ಎಂದು ಮ್ಯಾನೇಜರ್ ಹುದ್ದೆಯಲ್ಲಿ ಇರುವ ಶೇಕಡ 50ರಷ್ಟು ಮಂದಿ ಹೇಳಿದ್ದಾರೆ’ ಎಂದು ಸಮೀಕ್ಷೆಯ ವರದಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು