ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 13,993 ಹೊಸ ಪ್ರಕರಣ, 10,307 ಮಂದಿ ಬಿಡುಗಡೆ

Last Updated 20 ಫೆಬ್ರುವರಿ 2021, 6:00 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕಳೆದ 24 ತಾಸಿನಲ್ಲಿ 13,993 ಕೋವಿಡ್-19 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಅದೇ ಹೊತ್ತಿಗೆ ಕೊರೊನಾ ವೈರಸ್ ರೋಗಕ್ಕೆ ತುತ್ತಾಗಿರುವ 101 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಇದುವರೆಗೆ ಒಟ್ಟು 1,56,212 ಮಂದಿ ಬಲಿಯಾಗಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,09,77,387ಕ್ಕೆ ತಲುಪಿದೆ. ಈ ಪೈಕಿ 1,43,127 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಅಂದ ಹಾಗೆ ಇದುವರೆಗೆ 1,09,77,387 ಮಂದಿ ರೋಗಮುಕ್ತಿಯನ್ನು ಪಡೆದಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ಇದುವರೆಗೆ 1,07,15,204 ಕೋವಿಡ್-19 ಲಸಿಕೆ ನೀಡಲಾಗಿದೆ ಎಂಬುದನ್ನು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ವೈರಸ್ ಅಂಕಿಅಂಶ:
ಒಟ್ಟು ಪ್ರಕರಣ: 1,09,77,387
ಗುಣಮುಖ: 1,06,78,048
ಮೃತರ ಸಂಖ್ಯೆ: 1,56,212
ಸಕ್ರಿಯ ಪ್ರಕರಣಗಳು: 1,43,127

ಒಟ್ಟು ವ್ಯಾಕ್ಸಿನೇಷನ್: 1,07,15,204

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT