ಶನಿವಾರ, ಜನವರಿ 23, 2021
21 °C

Covid-19 India Update: ದೈನಂದಿನ ಕೊರೊನಾ ವೈರಸ್ ಸೋಂಕು ಪ್ರಕರಣಗಳಲ್ಲಿ ಇಳಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಕಳೆದ 24 ತಾಸಿನಲ್ಲಿ ದೇಶದಲ್ಲಿ ಹೊಸತಾಗಿ 16,505 ಪ್ರಕರಣಗಳು ದಾಖಲಾಗಿದೆ.

ಇದರೊಂದಿಗೆ ದೇಶದಲ್ಲಿ ಕೋವಿಡ್-19 ಒಟ್ಟು ಪ್ರಕರಣಗಳ ಸಂಖ್ಯೆ 1,03,40, 470ಕ್ಕೆ ಏರಿಕೆಯಾಗಿದೆ.

ಅದೇ ರೀತಿ ದೇಶದಲ್ಲಿ 2,43,953 ಸಕ್ರಿಯ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹಾಗೆಯೇ ಕಳೆದೊಂದು ದಿನದಲ್ಲಿ 19,557 ಮಂದಿ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 99,46,867ಕ್ಕೆ ತಲುಪಿದೆ.

ಇದನ್ನೂ ಓದಿ: 

ಇನ್ನು ಕಳೆದ 24 ತಾಸಿನಲ್ಲಿ 214 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,49,649ಕ್ಕೆ ಏರಿಕೆಯಾಗಿದೆ.

ಜನವರಿ 3ರಂದು 7,35,978 ಸ್ಯಾಂಪಲ್‌ಗಳನ್ನು ಒಳಗೊಂಡಂತೆ ಇದುವರೆಗೆ ಪರೀಕ್ಷಿಸಿದ ಒಟ್ಟು ಸ್ಯಾಂಪಲ್‌ಗಳ ಸಂಖ್ಯೆ 17,35,978ಕ್ಕೆ ತಲುಪಿದೆ ಎಂದು ಐಸಿಎಂಆರ್ ತಿಳಿಸಿದೆ.

ಕೊರೊನಾ ವೈರಸ್ ಅಂಕಿಅಂಶ ಇಂತಿದೆ:
ಒಟ್ಟು ಪ್ರಕರಣ: 1,03,40,470
ಸಕ್ರಿಯ ಪ್ರಕರಣ: 2,43,953
ಗುಣಮುಖ: 99,46,867
ಮರಣ: 1,49,649

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು