ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಮಹಾರಾಷ್ಟ್ರದಲ್ಲಿ ಒಂದೇ ದಿನ 14,348 ಹೊಸ ಪ್ರಕರಣ

Last Updated 3 ಅಕ್ಟೋಬರ್ 2020, 17:01 IST
ಅಕ್ಷರ ಗಾತ್ರ

ನವದೆಹಲಿ: ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಈವರೆಗೆ ಸೋಂಕಿನಿಂದ ಅತಿಹೆಚ್ಚು ತೊಂದರೆಗೀಡಾಗಿರುವ ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 14,348 ಹೊಸ ಪ್ರಕರಣಗಳು ಪತ್ತೆಯಾಗಿವೆ. 278 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14,30,861 ತಲುಪಿದೆ. 37,758 ಸಾವು ಸಂಭವಿಸಿದ್ದು, 11,34,555 ಮಂದಿ ಗುಣಮುಖರಾಗಿದ್ದಾರೆ. 2,58,108 ಸಕ್ರಿಯ ಪ್ರಕರಣಗಳಿವೆ.

ದೆಹಲಿಯಲ್ಲಿ 2,258 ಜನರಿಗೆ ಸೋಂಕು ತಗುಲಿದ್ದು, 34 ಜನ ಇಹಲೋಕ ತ್ಯಜಿಸಿದ್ದಾರೆ. 3,440 ಮಂದಿ ಚೇತರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 3,340 ಹೊಸ ಪ್ರಕರಣಗಳು ದೃಢಪಟ್ಟಿದ್ದು, 62 ಜನ ಸಾವಿಗೀಡಾಗಿದ್ದಾರೆ. 3,013 ಜನ ಗುಣಮುಖರಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 6,224 ಹೊಸ ಪ್ರಕರಣಗಳು ವರದಿಯಾಗಿದ್ದು, 41 ಮಂದಿ ಅಸುನೀಗಿದ್ದಾರೆ. 7,798 ಜನ ಚೇತರಿಸಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ 2,150 ಮಂದಿ ಸೋಂಕಿತರಾಗಿದ್ದು, 14 ಜನ ಮೃತಪಟ್ಟಿದ್ದಾರೆ. 2003 ಸೋಂಕಿತರು ಗುಣಮುಖರಾಗಿದ್ದಾರೆ.

ಉಳಿದಂತೆ ಚಂಡೀಗಡದಲ್ಲಿ 148, ಮಣಿಪುರದಲ್ಲಿ 252, ಉತ್ತರಾಖಂಡದಲ್ಲಿ 503, ಪಂಜಾಬ್‌ನಲ್ಲಿ 1,106, ಕರ್ನಾಟಕದಲ್ಲಿ 9,886, ಗುಜರಾತ್‌ನಲ್ಲಿ 1,343, ಹಿಮಾಚಲ ಪ್ರದೇಶದಲ್ಲಿ 170, ಜಾರ್ಖಂಡ್‌ನಲ್ಲಿ 877 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT