ನವದೆಹಲಿ: ಭಾರತದಲ್ಲಿ 15 ದಿನಗಳಲ್ಲಿ 50 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2 ಕೋಟಿ ದಾಟಿದೆ.

‘ಭಾರತದಲ್ಲಿ 3,57,229 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,02,82,833ಕ್ಕೆ ಏರಿದೆ. ಸೋಮವಾರ 3,449 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 2,22,408ಕ್ಕೆ ಏರಿಕೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

‘ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 34,47,133ಕ್ಕೆ ಏರಿದ್ದು, ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 17ರಷ್ಟು ಪಾಲನ್ನು ಹೊಂದಿದೆ. ದೇಶದ ಒಟ್ಟು ಚೇತರಿಕೆ ಪ್ರಮಾಣವು ಶೇಕಡ 81.91ರಷ್ಟಿದೆ’ ಎಂದು ಸಚಿವಾಲಯವುಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

‘ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,66,13,292ಕ್ಕೆ ಏರಿದ್ದರೆ, ಸಾವಿನ ಪ್ರಮಾಣ ಶೇಕಡ 1.10 ರಷ್ಟಿದೆ’ ಎಂದು ತಿಳಿಸಿದೆ.

ಭಾರತದಲ್ಲಿ 2020ರ ಡಿಸೆಂಬರ್ ವೇಳೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿತ್ತು. 107 ದಿನಗಳ ಬಳಿಕ ಏಪ್ರಿಲ್ 5ರಂದು ಒಟ್ಟು ಪ್ರಕರಣಗಳ ಸಂಖ್ಯೆ 1.25 ಕೋಟಿ ತಲುಪಿತು. ಆದರೆ ಕೇವಲ 15 ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1.50 ಕೋಟಿ ದಾಟಿತು.

ಮಹಾರಾಷ್ಟ್ರದಲ್ಲಿ(567), ದೆಹಲಿ(448), ಉತ್ತರ ಪ್ರದೇಶ(285), ಛತ್ತೀಸಗಡ (266), ಕರ್ನಾಟಕ(239), ಪಂಜಾಬ್(155), ರಾಜಸ್ತಾನ(154), ಗುಜರಾತ್ ಮತ್ತು ಹರಿಯಾಣ(140), ಜಾರ್ಖಾಂಡ(129), ಉತ್ತರಖಾಂಡ(128), ತಮಿಳುನಾಡಿನಲ್ಲಿ(122) ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.