ಶನಿವಾರ, ಮಾರ್ಚ್ 6, 2021
28 °C
ಸಾಂಕ್ರಾಮಿಕದಿಂದ 5,00,071 ಸಾವು* ಹೃದಯವಿದ್ರಾಕವಾದ ಮೈಲಿಗಲ್ಲು– ಬೈಡನ್‌

ಅಮೆರಿಕದಲ್ಲಿ ಕೋವಿಡ್‌ನಿಂದ ಸಾವು: 3 ಮಹಾಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ‘ಕೋವಿಡ್‌ 19‘ ಸಾಂಕ್ರಾಮಿಕದಿಂದ ಸತ್ತವರ ಸಂಖ್ಯೆ 5 ಲಕ್ಷ ತಲುಪಿದ್ದು, ವಿಶ್ವದ ಒಂದನೇ ಮಹಾಯುದ್ಧ, ಎರಡನೇ ಮಹಾಯುದ್ಧ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ಸತ್ತ ಅಮೆರಿಕನ್ನರ ಸಂಖ್ಯೆಗೆ ಇದು ಸಮನಾಗಿದೆ.

ಎರಡನೇ ಮಹಾಯುದ್ಧದಲ್ಲಿ 4,05,000, ವಿಯೆಟ್ನಾಂ ಯುದ್ಧದಲ್ಲಿ 58 ಸಾವಿರ ಮತ್ತು ಕೊರಿಯನ್ ಯುದ್ಧದಲ್ಲಿ 36 ಸಾವಿರ ಮಂದಿ ಅಮೆರಿಕನ್ನರು ಸಾವನ್ನಪ್ಪಿದ್ದಾರೆ.

‘ಒಂದು ದೇಶವಾಗಿ, ಇಂಥ ಕ್ರೂರವಾದ ಘಟನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನಾವು ಇನ್ನೂ ಕಠಿಣವಾಗಿ ಈ ರೋಗದ ವಿರುದ್ಧ ಹೋರಾಡುತ್ತೇವೆ. ನಾವು ದುಃಖಕ್ಕೆ ಜಗ್ಗಬಾರದು. ಅಂಕಿ ಅಂಶಗಳೊಂದಿಗೆ ಜೀವನ ನೋಡುವುದನ್ನು ವಿರೋಧಿಸಬೇಕು‘ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದರು.

ಕೋವಿಡ್‌ನಿಂದ ಮೃತಪಟ್ಟವರಿಗೆ ಗೌರವಸಲ್ಲಿಸುವುದಕ್ಕಾಗಿ ಶ್ವೇತಭವನದಲ್ಲಿ ಸೋಮವಾರ ಸಂಜೆ ನಡೆದ ‘ಮೋಂಬತ್ತಿ ಬೆಳಗುವ‘ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‌‘ಕೋವಿಡ್‌ನಿಂದ ಅಮೆರಿಕದಲ್ಲಿ 5,00,071 ಮಂದಿ ಸತ್ತಿದ್ದಾರೆ. ಇದೊಂದು ಹೃದಯವಿದ್ರಾಕವಾದ ಮೈಲಿಗಲ್ಲು, 2.81 ಕೋಟಿಗೂ ಹೆಚ್ಚು ಅಮೆರಿಕನ್ನರು ಸೋಂಕಿಗೆ ಒಳಗಾಗಿದ್ದಾರೆ. ಇದು ಮತ್ತೊಂದು ಜಾಗತಿಕ ದಾಖಲೆ‘ ಎಂದು ಬಿಡೆನ್ ಹೇಳಿದರು.

ಶ್ವೇತಭವನದ ಹೊರಗೆ 500ಕ್ಕೂ ಹೆಚ್ಚು ಮೇಣದ ಬತ್ತಿಗಳನ್ನು ಹಚ್ಚಲಾಯಿತು. ನಂತರ ನಡೆದ ‘ಮೌನಾಚರಣೆ‘ಯಲ್ಲಿ ಬೈಡನ್ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪತಿ ಡೌಗ್ ಎಮ್ಹಾಪ್‌ ಅವರೊಂದಿಗೆ ಪಾಲ್ಗೊಂಡರು.

ದೇಶದಲ್ಲಿ ರಾಜಕೀಯ ಮಾಡುತ್ತಾ, ಸುಳ್ಳು ಸುದ್ದಿ ನೀಡುತ್ತಾ ಕುಟುಂಬಗಳು, ಸಮುದಾಯಗಳನ್ನು ಒಡೆಯುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ ಬೈಡನ್, ಈ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಬಹಳ ಜನರು ಸಾವನ್ನಪ್ಪಿದ್ದಾರೆ. ಸತ್ತಿರುವವರು ಡೆಮಾಕ್ರಿಟಿಕ್ ಪಕ್ಷದವರಲ್ಲ ಹಾಗೂ ರಿಪಬ್ಲಿಕನ್ನರೂ ಅಲ್ಲ. ಅವರೆಲ್ಲ ಅಮೆರಿಕದ ನಾಗರಿಕರು‘ ಎಂದು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು