ಜೈಪುರ: ಕೋವಿಡ್-19 ನಿಯಂತ್ರಿಸುವ ಸಲುವಾಗಿ ಕನ್ವರ್ ಯಾತ್ರೆ ಮತ್ತು ಈದ್-ಉಲ್-ಜುಹಾ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳನ್ನು ನಿರ್ಬಂಧಿಸಲಾಗುವುದು ಎಂದುರಾಜಸ್ಥಾನ ಸರ್ಕಾರ ತಿಳಿಸಿದೆ.

ಅಧಿಸೂಚನೆ ಪ್ರಕಾರ, ಮಥುರಾದ ಗೋವರ್ಧನ ಪ್ರದೇಶದಲ್ಲಿ ಪ್ರತಿವರ್ಷ ಏರ್ಪಡಿಸುವ ಮುದಿಯಾ ಪೂನೊ ಮೇಳವೂ ಈ ವರ್ಷ ನಡೆಯುವುದಿಲ್ಲ. ಭಕ್ತರು ಗುಂಪುಗೂಡುವುದಕ್ಕೆ ಅನುಮತಿನೀಡಲಾಗುವುದಿಲ್ಲ. ಭಕ್ತರು ಮನೆಗಳಲ್ಲಿಯೇ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಮತ್ತು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆಸರ್ಕಾರ ಮನವಿ ಮಾಡಿದೆ.

ಉತ್ತರಾಖಂಡದಲ್ಲಿ ಕನ್ವರ್ ಯಾತ್ರೆಯನ್ನು ಸತತ ಎರಡನೇ ವರ್ಷವೂ ನಿಷೇಧಿಸಲಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ಇದುವರೆಗೆ9,43,788 ಸೋಂಕಿತರು ಗುಣಮುಖರಾಗಿದ್ದು,8,947 ಮಂದಿ ಮೃತಪಟ್ಟಿದ್ದಾರೆ.ಇನ್ನೂ522 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇದುವರೆಗೆ 2ಕೋಟಿ 75ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.