ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19ನಿಂದ ಬದುಕುಳಿದವರಿಗೆ ತೀವ್ರ ಅನಾರೋಗ್ಯ, ಸಾವಿನ ಅಪಾಯ: ಅಧ್ಯಯನ

‘ನೇಚರ್’ ಜರ್ನಲ್‌ನಲ್ಲಿ ಅಧ್ಯಯನದ ವರದಿ ಪ್ರಕಟ
Last Updated 23 ಏಪ್ರಿಲ್ 2021, 16:29 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ನಿಂದ ಚೇತರಿಸಿಕೊಂಡು ಬದುಕುಳಿದವರಿಗೆ ಸಾವಿನ ಅಪಾಯ ಹಾಗೂ ತೀವ್ರ ಅನಾರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೋವಿಡ್‌–19 ಸೋಂಕಿನ ಪ್ರಮಾಣ ಅಲ್ಪಪ್ರಮಾಣದಲ್ಲಿದ್ದು ಆಸ್ಪತ್ರೆಗೆ ದಾಖಲಾಗದಿದ್ದವರಲ್ಲೂ ತೀವ್ರ ಅನಾರೋಗ್ಯ ಮತ್ತು ಸಾವಿನ ಅಪಾಯ ತಪ್ಪಿದ್ದಲ್ಲ ಎಂದು ‘ನೇಚರ್’ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ವರದಿಯ ಸಾರಾಂಶ ತಿಳಿಸಿದೆ. ಕೋವಿಡ್‌ನ ಅಡ್ಡಪರಿಣಾಮವು ಮುಂಬರುವ ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯ ಮೇಲೂ ಪರಿಣಾಮ ಬೀರಲಿದೆ ಎಂದೂ ಅಧ್ಯಯನದಲ್ಲಿ ಹೇಳಲಾಗಿದೆ.

ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡವು ಸತತ ಆರು ತಿಂಗಳ ಕಾಲ ಕೋವಿಡ್‌–19 ಕುರಿತಂತೆ ವಿವರವಾದ ಅಧ್ಯಯನ ಕೈಗೊಂಡಿದ್ದು, ಕೋವಿಡ್‌ನಿಂದಾಗುವ ದೀರ್ಘಕಾಲೀನ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT