ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಒಂದು ಡೋಸ್ ಕೋವಿಡ್ ಲಸಿಕೆ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

Last Updated 5 ಜನವರಿ 2021, 0:42 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಗಳನ್ನು ಭಾರತ ಸರ್ಕಾರ ಖರೀದಿಸುವ ದರ ಒಂದು ಡೋಸ್‌ಗೆ3–4 ಡಾಲರ್ (₹ 219–292) ಆಗಲಿದೆ. ಖಾಸಗಿ ಮಾರುಕಟ್ಟೆಯಲ್ಲಿ ಇದು ದುಪ್ಪಟ್ಟಾಗಲಿದೆ ಎಂದು ಭಾರತದಲ್ಲಿ ಲಸಿಕೆ ಉತ್ಪಾದನೆ ಮಾಡುತ್ತಿರುವ ಸೀರಮ್ ಕಂಪನಿ ಸಿಇಓ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕೆ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಕೋವಿಡ್ ಲಸಿಕೆ ತಯಾರಿಕೆಗೆ ಪರವಾನಗಿ ಪಡೆದಿದ್ದು, ಈಗಾಗಲೇ ಹತ್ತಿರತ್ತಿರ 5ಕೋಟಿ ಡೋಸ್ ಲಸಿಕೆ ತಯಾರಿಸಿದೆ.

ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಕಂಪನಿ ಸಿಇಓ ಅದರ್ ಪೋನವಾಲಾ, ಕಂಪನಿಯು ಕೋವಿಶೀಲ್ಡ್ ಲಸಿಕೆಯನ್ನು ಮೊದಲಿಗೆ ಭಾರತ ಸರ್ಕಾರ ಮತ್ತು ಲಸಿಕೆಗಳು, ರೋಗನಿರೋಧಕಗಳ ಜಾಗತಿಕ ಒಕ್ಕೂಟದ(GAVI) ದೇಶಗಳಿಗೆ ಮೊದಲ ಹಂತದಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತದೆ, ನಂತರ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ತುರ್ತು ಬಳಕೆಗಾಗಿ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ಬಳಸಲು ಭಾರತೀಯ ಔಷಧ ನಿಯಂತ್ರಕ ಭಾನುವಾರ ಅನುಮೋದನೆ ನೀಡಿತ್ತು.

"ಲಸಿಕೆ ಕೈಗೆಟುಕುವ ಮತ್ತು ಪ್ರತಿಯೊಬ್ಬರಿಗೂ ಸಿಗಬೇಕೆಂದು ನಾವು ಬಯಸುತ್ತೇವೆ. ಭಾರತ ಸರ್ಕಾರವು ದೊಡ್ಡ ಪ್ರಮಾಣದ ಲಸಿಕೆ ಖರೀದಿಸುವುದರಿಂದ ಲಸಿಕೆಯ ದರ 3-4 ಡಾಲರ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ," ಎಂದು ಅವರು ಹೇಳಿದ್ದಾರೆ.

ಭಾರತ ಸರ್ಕಾರಕ್ಕೆ ಅಗತ್ಯವಿದ್ದಷ್ಟು ಲಸಿಕೆ ಪೂರೈಸಿದ ಬಳಿಕವಷ್ಟೇ ಖಾಸಗಿ ಮಾರುಕಟ್ಟೆಯಲ್ಲಿ 6–8 ಡಾಲರ್‌ನಂತೆ ಲಸಿಕೆ ಮಾರಾಟ ಮಾಡಲಾಗುತ್ತದೆ ಎಂದಿದ್ದಾರೆ.

ಈ ತಿಂಗಳಲ್ಲಿ ಸೀರಮ್ ಸಂಸ್ಥೆ10 ಕೋಟಿ ಲಸಿಕೆ ಉತ್ಪಾದಿಸಲಿದ್ದು, ಏಪ್ರಿಲ್ ಹೊತ್ತಿಗೆ ಇದು ದುಪ್ಪಟ್ಟಾಗಲಿದೆ ಎಂದು ಹೇಳಿದ್ದಾರೆ.

ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರಿಗೆ ಆದ್ಯತೆ ಮೇಲೆ ಲಸಿಕೆ ನೀಡಲು ಜುಲೈ 201ರ ಹೊತ್ತಿಗೆ 30 ಕೋಟಿ ಲಸಿಕೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.

* ನಮ್ಮ ಆದ್ಯತೆ ಭಾರತದ ಮಾರುಕಟ್ಟೆ. ನಂತರ ಒಪ್ಪಂದ ಮಾಡಿಕೊಂಡ ದೇಶಗಳು. ಮಾರ್ಚ್–ಏಪ್ರಿಲ್ ಹೊತ್ತಿಗೆ ಲಸಿಕೆ ರಫ್ತಿಗೆ ಅನುಮತಿ ಸಿಗಬಹುದು.

–ಅದಾರ್ ಪೂನಾವಾಲಾ, ಸೆರಂ ಸಂಸ್ಥೆ ಸಿಇಒ

ಮಾರುಕಟ್ಟೆಯಲ್ಲಿ ದರ ದುಪ್ಪಟ್ಟು

* ಮಾರುಕಟ್ಟೆಯಲ್ಲಿ ಲಸಿಕೆಯ ಒಂದು ಡೋಸ್ ಬೆಲೆ 6-8 ಡಾಲರ್ (₹438ರಿಂದ ₹584)

* ಲಸಿಕೆ ತಯಾರಿಕೆಗೆ ಅನುಮತಿ ಸಿಕ್ಕಿದ್ದು, ಪ್ರಕ್ರಿಯೆಗಳು ಮುಗಿಯಲು 7–10 ದಿನ ಹಿಡಿಯಲಿದೆ

* ಬಾಂಗ್ಲಾದೇಶ, ಮ್ಯಾನ್ಮಾರ್, ಮೊರಾಕ್ಕೊದಂತಹ ದೇಶಗಳ ಜೊತೆ ಸೆರಂ ಸಂಸ್ಥೆಯು ಲಸಿಕೆ ಪೂರೈಕೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದೆ

* 2-3 ತಿಂಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದರೆ ಅದು ಪರಿಣಾಮಕಾರಿ–ಸೆರಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT