ಬುಧವಾರ, ಅಕ್ಟೋಬರ್ 20, 2021
25 °C

ಲಸಿಕೆ: ಕಡಿಮೆಯಾದ ಹಿಂಜರಿಕೆ ಮಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಲಸಿಕೆ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿ ದೇಶದ ವಯಸ್ಕರಲ್ಲಿದ್ದ ಹಿಂಜರಿಕೆ ಕಡಿಮೆಯಾಗಿದೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. 

ಕೇವಲ ಶೇ 7ರಷ್ಟು ವಯಸ್ಕರು ಮಾತ್ರ ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದು ಈ ವರೆಗಿನ ಅತ್ಯಂತ ಕಡಿಮೆ ಹಿಂಜರಿಕೆ ಮಟ್ಟವಾಗಿದೆ ಎಂದು ಇದೇ ಸಮೀಕ್ಷೆ ಹೇಳಿದೆ. 

‘ಲೋಕಲ್‌ ಸರ್ಕಲ್ಸ್‌’ ಎಂಬ ಆನ್‌ಲೈನ್‌ ವೇದಿಕೆ ಈ ಸಮೀಕ್ಷೆ ನಡೆಸಿದೆ. ಶೇ 67ರಷ್ಟು ಪುರುಷರು ಹಾಗೂ ಶೇ 33ರಷ್ಟು ಮಹಿಳೆಯರಿದ್ದ 301 ಜಿಲ್ಲೆಗಳ 12,810 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಶೇ 27ರಷ್ಟು ವಯಸ್ಕರು ಲಸಿಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧಾರವನ್ನೇ ಕೈಗೊಂಡಿಲ್ಲ. ಸದ್ಯ ಲಭ್ಯವಿರುವ ಲಸಿಕೆಗಳು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಪರಿಣಾಮಕಾರಿ ರಕ್ಷಣೆ ನೀಡುವ ಕುರಿತು ಮನವರಿಕೆ ಆಗದಿರುವುದೇ ಇದಕ್ಕೆ ಕಾರಣ. ಇವರನ್ನು ಲಸಿಕೆ ಪಡೆಯಲು ಹಿಂಜರಿಯುವವರು ಎಂಬುದಾಗಿ ವರ್ಗೀಕರಿಸಬಹುದು ಎಂದು ಸಮೀಕ್ಷೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು