ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೊಕರೆನ್ಸಿ ವಹಿವಾಟನ್ನು ಆಸ್ತಿ ಎಂದು ಗುರುತಿಸಿ: ಸ್ವದೇಶಿ ಜಾಗರಣ ಮಂಚ್‌

Last Updated 20 ನವೆಂಬರ್ 2021, 10:29 IST
ಅಕ್ಷರ ಗಾತ್ರ

ನವದೆಹಲಿ:ಕ್ರಿಪ್ಟೊಕರೆನ್ಸಿ ವಹಿವಾಟುಗಳನ್ನು ಆಸ್ತಿ ಎಂದು ಗುರುತಿಸಿ, ಅದನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಹೇಳಿದೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸ್ವದೇಶಿ ಜಾಗರಣ್ ಮಂಚ್‌ನ (ಎಸ್‌ಜೆಎಂ) ಸಹ ಸಂಚಾಲಕ ಅಶ್ವನಿ ಮಹಾಜನ್, ‘ಕ್ವಿಪ್ಟೊಕರೆನ್ಸಿಗಳ ಮೈನಿಂಗ್, ಪ್ರೊಸಸಿಂಗ್‌ ಮತ್ತು ವಹಿವಾಟು ಪ್ರಕ್ರಿಯೆಯಲ್ಲಿ ಬಳಕೆಯಾಗುವ ದತ್ತಾಂಶ ಮತ್ತು ಹಾರ್ಡ್‌ವೇರ್‌ ದೇಶೀಯ ಸರ್ವರ್‌ಗಳಲ್ಲಿ ಉಳಿಯುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇದು ಅಕ್ರಮ ವಹಿವಾಟುಗಳನ್ನು ಪತ್ತೆಹಚ್ಚಲು ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯವಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT