ಗಾರ್ಮೆಂಟ್ಸ್ ಹೆಸರಿನಲ್ಲಿ ₹1 ಕೋಟಿ ಮೌಲ್ಯದ 90 ಐಫೋನ್ ಕಳ್ಳಸಾಗಣೆ ಪತ್ತೆ

ಬೆಂಗಳೂರು: ಗಾರ್ಮೆಂಟ್ಸ್ ಹೆಸರಿನಲ್ಲಿ ದುಬೈನಿಂದ ಭಾರತಕ್ಕೆ ತರಲಾಗುತ್ತಿದ್ದ ₹1 ಕೋಟಿ ಮೌಲ್ಯದ 90 ಐಫೋನ್‌ಗಳನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಸುಂಕ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ದೆಹಲಿ ಏರ್‌ಪೋರ್ಟ್‌ನ ಹೊಸ ಕೊರಿಯರ್ ಟರ್ಮಿನಲ್‌ಗೆ ದುಬೈನಿಂದ ಬಂದ ಮೂರು ಪ್ರತ್ಯೇಕ ಪ್ಯಾಕೇಜ್‌ಗಳ ಪರಿಶೀಲನೆ ಸಂದರ್ಭದಲ್ಲಿ ಈ ವಂಚನೆ ಪತ್ತೆಯಾಗಿದೆ.
ಎಕ್ಸ್ ರೇ ಸ್ಕ್ಯಾನ್ ವಿಭಾಗದ ಅಧಿಕಾರಿಯೋರ್ವರು ಗಾರ್ಮೆಂಟ್ಸ್ ಹೆಸರಿನ ಪ್ಯಾಕೇಜ್‌ನಲ್ಲಿ ಐಫೋನ್‌ಗಳು ಇರುವುದನ್ನು ಗಮನಿಸಿದ್ದಾರೆ.
ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುವ 9 ಆ್ಯಪ್ಗಳ ತೆಗೆದುಹಾಕಿದ ಗೂಗಲ್
ACC Export Commissionerate at New Courier Terminal intercepted 3 consignments & seized 90 iPhone 12 Pro having market value approx Rs. 1 crore due to alertness of officer posted at X-ray scanning. The consignments were shipped from Dubai & misdeclared as garments. pic.twitter.com/Ro6cuUuw4d
— Delhi Customs (@Delhicustoms) July 9, 2021
ಮೂರು ಪ್ಯಾಕ್‌ಗಳಲ್ಲಿ ಒಟ್ಟು 90 ಆ್ಯಪಲ್ ಐಫೋನ್ 12 ಪ್ರೊ ಸಾಗಿಸಲಾಗುತ್ತಿತ್ತು ಎಂದು ಏರ್ ಕಾರ್ಗೋ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.