ಶನಿವಾರ, ಮಾರ್ಚ್ 25, 2023
23 °C

ಹಿಮಾಚಲ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ: ಹಣಕ್ಕೆ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಶಿಮ್ಲಾ: ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಸೃಷ್ಟಿಸಿ, ಹಣಕ್ಕಾಗಿ ಬೇಡಿಕೆ ಇಡಲಾಗಿದೆ.

ತಮ್ಮ ಹೆಸರಿನಲ್ಲಿ ಸೃಷ್ಠಿಸಲಾಗಿರುವ ನಕಲಿ ಖಾತೆಯನ್ನು ಬಳಸಿಕೊಂಡು, ಕೆಲವು ಕಿಡಿಗೇಡಿಗಳು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಜನರು ಜಾಗೃತರಾಗಿರಿ ಮತ್ತು ಅಂತಹ ಸಂದೇಶಗಳ ಕಡೆ ಗಮನಹರಿಸಬೇಡಿ ಎಂದು ಅರ್ಲೇಕರ್ ಸೋಮವಾರ ಹೇಳಿದ್ದಾರೆ. 

ಈ ಸಂಬಂಧ ಹಿಮಾಚಲ ಪ್ರದೇಶ ಪೊಲೀಸರು ದೂರನ್ನು ದಾಖಲಿಸಿದ್ದಾರೆ ಹಾಗೂ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ  ಈಗಾಗಲೇ ಸಂಬಂಧಪಟ್ಟವರಿಗೆ  ಸೂಚಿಸಿದ್ದಾರೆ.

ಕಳೆದ ವರ್ಷ, ಶಂಕಿತ ಸೈಬರ್ ಕ್ರಿಮಿನಲ್‌ಗಳು ವೈದ್ಯಕೀಯ ತುರ್ತು ಪರಿಸ್ಥಿತಿಯ ನೆಪದಲ್ಲಿ ಹಣ ಪಡೆಯಲು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯಂತಹ ಹಿರಿಯ ನಾಯಕರ ಹೆಸರನ್ನು ಬಳಸಿಕೊಂಡು ವಂಚಿಸಿದ್ದರು.

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು 18,000 ಸೈಬರ್ ಅಪರಾಧದ ಪ್ರಕರಣಗಳು ವರದಿಯಾಗಿವೆ.  ಇವುಗಳಲ್ಲಿ ಶೇ 50ರಷ್ಟು ಹಣಕಾಸು ವಂಚನೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು