ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ನಕಲಿ ಮದ್ಯ ಸೇವನೆ; ಸಾವಿನ ಸಂಖ್ಯೆ 24ಕ್ಕೆ ಏರಿಕೆ

Last Updated 26 ಜುಲೈ 2022, 6:36 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ ಹಾಗೂಬೊಟಾಡ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಭಾವ್‌ನಗರದ ಐಜಿಪಿ ಅಶೋಕ್‌ಕುಮಾರ್‌ ಯಾದವ್‌ ಅವರು ನೀಡಿರುವ ಮಾಹಿತಿ ಪ್ರಕಾರ ಮೃತಪಟ್ಟವರಲ್ಲಿ 15 ಮಂದಿ ಬೊಟಾಡ ಜಿಲ್ಲೆಯವರು ಹಾಗೂ ಉಳಿದ 9 ಜನರು ಅಹಮದಾಬಾದ್‌ನ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.

ಪ್ರಕರಣದ ಕಿಂಗ್‌ಪಿನ್‌ ಹಾಗೂ ಮೆಥನಾಲ್‌ (ರಾಸಾಯನಿಕ) ಪೂರೈಕೆದಾರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಸೋಮವಾರ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿ600 ಲೀಟರ್‌ನಷ್ಟು ಮೆಥನಾಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಬೊಟಾಡ ಪೊಲೀಸ್‌ ಮೂಲಗಳು ತಿಳಿಸಿವೆ. ಅಹಮದಾಬಾದ್‌ ಮೂಲಕ ಅಮೋಸ್‌ ಕಂಪನಿಯ ಜಯೇಶ್‌ಭಭಾಯ್‌ ಎಂಬಾತ ರಾಸಾಯನಿಕ ಪೂರೈಸಿದ್ದ ಎನ್ನಲಾಗಿದೆ.

ಬೊಟಾಡ ಗ್ರಾಮೀಣ ಪ್ರದೇಶದ, ಅದರಲ್ಲೂ ಮುಖ್ಯವಾಗಿದರ್ವಾಲ ತಾಲ್ಲೂಕಿನ 47 ಜನರನ್ನು ಮಂಗಳವಾರ ಬೆಳಗ್ಗಿನ ವರೆಗೆ ಭಾವ್‌ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಏತನ್ಮಧ್ಯೆ, ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬೊಟಾಡ ಕಾಂಗ್ರೆಸ್‌ ಮುಖಂಡ ಮನಹರ್ ಪಟೇಲ್‌ ಎನ್ನುವವರು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24 ಅಲ್ಲ, 31 ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT