ಬುಧವಾರ, ನವೆಂಬರ್ 25, 2020
19 °C

ದೆಹಲಿ: ವಾಯು ಗುಣಮಟ್ಟ ಸ್ವಲ್ಪ ಸುಧಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗಾಳಿಯ ವೇಗ ಹೆಚ್ಚಿರುವುದರಿಂದ ದೆಹಲಿಯಲ್ಲಿ ಸೋಮವಾರ ಮಾಲಿನ್ಯಪ್ರಮಾಣದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಂಡುಬಂದಿದೆ.

ಮಾಲಿನ್ಯದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡುಬಂದರೂ ಸೋಮವಾರ ಗಾಳಿ ಗುಣಮಟ್ಟದ ಸೂಚ್ಯಂಕವು 286 (ಎಕ್ಯೂಐ) ದಾಖಲಾಗಿದೆ. ಇದನ್ನು ‘ಕಳಪೆ’ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ.

ದೆಹಲಿಯಲ್ಲಿ ಭಾನುವಾರ ಗಾಳಿಯ ಗುಣಮಟ್ಟ ಸೂಚ್ಯಂಕವು 364 ಇತ್ತು. ದೆಹಲಿಯನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವಿಕೆಯು ಶೇ 40 ರಷ್ಟು ಮಾಲಿನ್ಯಕ್ಕೆ ಕಾರಣವಾಗದೆ.

ದೆಹಲಿಯಲ್ಲಿ ಶನಿವಾರ (367), ಶುಕ್ರವಾರ (374), ಗುರುವಾರ (395), ಬುಧವಾರ (297), ಮಂಗಳವಾರ(312) ಮತ್ತು ಸೋಮವಾರ (353) ಎಐಕ್ಯೂ ವರದಿಯಾಗಿತ್ತು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವಿಕೆ ಗಮನಾರ್ಹವಾಗಿ ಹೆಚ್ಚಿದೆ. ಇದು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಾಯುವಿನ ಗುಣಮಟ್ಟ ಮಾಪನ ಮಾಡುವ ದೆಹಲಿಯ ವಾಯು ಗುಣಮಟ್ಟ ಆರಂಭಿಕ ಎಚ್ಚರಿಕಾ ವ್ಯವಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು