ಅತ್ಯಂತ ಕಳಪೆ ಮಟ್ಟವನ್ನು ತಲುಪಿದ ದೆಹಲಿ ವಾಯು ಗುಣಮಟ್ಟ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟವು ಶುಕ್ರವಾರದಂದು 'ಅತ್ಯಂತ ಕಳಪೆ ಮಟ್ಟ'ವನ್ನು ತಲುಪಿದೆ ಎಂದು ವಾಯು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (ಎಸ್‌ಎಎಫ್ಎಆರ್) ವರದಿ ಮಾಡಿದೆ.
ಶುಕ್ರವಾರ ಬೆಳಗ್ಗೆ ನಗರದ ಹಲವಾರು ಭಾಗಗಳಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಅಲ್ಲದೆ ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟದಲ್ಲಿ ಉಳಿದುಕೊಂಡಿದೆ ಎಂದು ವರದಿ ಮಾಡಿದೆ.
ಪಶ್ಚಿಮ ಆವಾಂತರದ ಪ್ರಭಾವದಡಿಯಲ್ಲಿ ಚದುರಿದ ಮಳೆಯಿಂದಾಗಿ ಡಿಸೆಂಬರ್ 11 ಹಾಗೂ 12ರಂದು ವಾತಾವರಣದಲ್ಲಿ ಗಾಳಿ ಗುಣಮಟ್ಟದಲ್ಲಿ ಸುಧಾರಣೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಪ್ರತಿಭಟನೆ 16ನೇ ದಿನಕ್ಕೆ: ಪರಿಹಾರ ದೇವರಿಗೆ ಗೊತ್ತು –ರೈತ ಮುಖಂಡ
ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಡಿಸೆಂಬರ್ 11ರಂದು ತುಂಬಾ ಕಳಪೆ ವಿಭಾಗದಿಂದ ಕಳಪೆ ಮಟ್ಟಕ್ಕೆ ಸುಧಾರಿಸುವ ಸಾಧ್ಯತೆಯಿದೆ. ಹಾಗೊಂದು ವೇಳೆ ಮಳೆಯಾದ್ದಲ್ಲಿ ವಾಯು ಗುಣಮಟ್ಟ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಎಸ್‌ಎಎಫ್ಎಆರ್ ತಿಳಿಸಿದೆ.
ಶುಕ್ರವಾರ ಬೆಳಗ್ಗೆ 9ರ ಸುಮಾರಿಗೆ ಎಕ್ಯೂಐ ಸೂಚಿಯು 302ರಷ್ಟಿತ್ತು. 0-50ರ ಎಕ್ಯೂಐ ಮಟ್ಟವನ್ನು ಉತ್ತಮ ಎಂದೂ 51-100ರ ವರೆಗೆ ತೃಪ್ತಿಕರ, 101-200ರ ವರೆಗೆ ಮಧ್ಯಮ, 201-300ರ ವರೆಗೆ ಕಳಪೆ, 301-400ರ ವರೆಗೆ ತುಂಬಾ ಕಳಪೆ ಮತ್ತು 401-500ರ ವರೆಗೆ ಅತೀವ ತೀವ್ರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ರೈಲು ತಡೆ ಚಳವಳಿಗೆ ರೈತರ ನಿರ್ಧಾರ: ಶೀಘ್ರ ದಿನಾಂಕ ನಿಗದಿ
ದೆಹಲಿಯ ವಾಯು ಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿರುವುದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದೆಗೆಡುತ್ತಿದ್ದು, ಉಸಿರಾಟ ಸಮಸ್ಯೆ, ಕಣ್ಣಿನ ಉರಿ ಹಾಗೂ ತ್ವಚೆಯ ಅಲರ್ಜಿ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.