ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ‘ಅತಿ ಕಿರಿಯ‘ ಪ್ರಯಾಣಿಕನನ್ನು ಮಂಗಳವಾರ ಬರ ಮಾಡಿಕೊಂಡದೆ.
ಕರ್ನಾಟಕ ಮೂಲದ ಮಹಿಳೆಯೊಬ್ಬರು ಏರ್‌ಪೋರ್ಟ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದೆಹಲಿಯಿಂದ ಹುಬ್ಬಳ್ಳಿಗೆ ತೆರಳಲು ಏರ್‌ಪೋರ್ಟ್‌ನ ಮೂರನೇ ಟರ್ಮಿನಲ್‌ನಲ್ಲಿ ಕಾಯುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಟರ್ಮಿನಲ್‌ನಲ್ಲಿದ್ದ ಆಸ್ಪತ್ರೆಯ ವೈದ್ಯರು ಉಪಚರಿಸಿ, ಹೆರಿಗೆ ಮಾಡಿಸಿದ್ದಾರೆ. ಮಹಿಳೆಗೆ ಗಂಡು ಮಗುವಾಗಿದೆ.
‘ಶೌಚಾಲಯಕ್ಕೆ ತೆರಳಿದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸುದೈವವಶಾತ್ ನಮ್ಮ ವೈದ್ಯಕೀಯ ವ್ಯವಸ್ಥೆ ಸಮೀಪವೇ ಇತ್ತು. ಅವರನ್ನು ಕರೆತಂದು ಉಪಚರಿಸಲಾಯ್ತು. ಗಂಡು ಮಗುವಿಗೆ ಜನ್ಮ ನೀಡಿದ್ದಾರೆ‘ ಎಂದು ಏರ್‌ಪೋರ್ಟ್‌ನಲ್ಲಿರುವ ಮೇದಾಂತ ಆಸ್ಪತ್ರೆಯ ಡಾ. ಪ್ರವೀಣ್ ಸಿಂಗ್ ಹೇಳಿದ್ದಾರೆ.
‘ಅವರನ್ನು ಬೆಳಿಗ್ಗೆ 9.20ಕ್ಕೆ ಕರೆತರಲಾಯ್ತು. 9.40ಕ್ಕೆ ಅವರು ಗಂಡು ಮಗುವಗೆ ಜನ್ಮ ನೀಡಿದ್ದಾರೆ. ಏರ್‌ಪೋರ್ಟ್‌ನಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಮಗು ಇದಾಗಿದೆ‘ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
‘ಅತಿ ಕಿರಿಯ ಪ್ರಯಾಣಿಕಣಿಗೆ ಸ್ವಾಗತ. ಟರ್ಮಿನಲ್ 3ರಲ್ಲಿ ಮೊದಲ ಮಗುವಿನ ಆಗಮನ ಖುಷಿಯನ್ನು ಹಂಚಿಕೊಳ್ಳುತ್ತಿದ್ದೇವೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ‘ ಎಂದು ಏರ್‌ಪೋರ್ಟ್ ಆಪರೇಟರ್ ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.