ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಉಪಚುನಾವಣೆ: ಎಎಪಿಯ ದುರ್ಗೇಶ್ ಪಾಠಕ್‌ಗೆ ಗೆಲುವು

Last Updated 26 ಜೂನ್ 2022, 9:22 IST
ಅಕ್ಷರ ಗಾತ್ರ

ನವದೆಹಲಿ: ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರು ಗೆಲುವು ದಾಖಲಿಸಿದ್ದಾರೆ.

ಪಾಠಕ್ ಅವರು ಬಿಜೆಪಿಯ ಅಭ್ಯರ್ಥಿ ರಾಜೇಶ್ ಭಾಟಿಯಾ ವಿರುದ್ಧ 11,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ ಎಎಪಿಯ ಪಾಠಕ್ ಅವರು 40,319 ಮತಗಳನ್ನು ಗಳಿಸಿದ್ದಾರೆ. ಅವರ ನಿಕಟ ಸ್ಪರ್ಧಿ ಭಾಟಿಯಾ 28,851 ಮತಗಳನ್ನು ಗಳಿಸಿದರು.

ಈ ಮೂಲಕ 11,468 ಮತಗಳ ಅಂತರದಲ್ಲಿ ಭಾಟಿಯಾ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನ ಪ್ರೇಮಲತಾ ಅವರಿಗೆ 2,014 ಮತಗಳು ಮಾತ್ರ ದೊರಕಿದವು.

ಜೂನ್ 23ರಂದು ನಡೆದ ಉಪಚುನಾವಣೆಯಲ್ಲಿ ಶೇ 43.75ರಷ್ಟು ಮತದಾನವಾಗಿತ್ತು. ಭಾರಿ ಭದ್ರತೆಯ ನಡುವೆ ಇಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT