ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಕೃಷಿ ಕಾಯ್ದೆ ಪ್ರತಿಗಳನ್ನು ಹರಿದು ಹಾಕಿದ ಕೇಜ್ರಿವಾಲ್

Last Updated 17 ಡಿಸೆಂಬರ್ 2020, 12:27 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕೃಷಿ ಕಾಯ್ದೆಗಳ ಪ್ರತಿಯನ್ನು ದೆಹಲಿ ವಿಧಾನಸಭೆಯಲ್ಲಿ ಹರಿದು ಹಾಕಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಬ್ರಿಟೀಷರಿಗಿಂತ ಕೆಟ್ಟವರಾಗಬಾರದು’ ಎಂದು ಕಟು ಶಬ್ಧಗಳಿಂದ ಟೀಕಿಸಿದ್ದಾರೆ. ಇದೇವೇಳೆ, ‘ಕೊರೋನಾ ಸಂಕಷ್ದದಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನ ತರಾತುರಿಯಲ್ಲಿ ಜಾರಿಮಾಡುವ ಅಗತ್ಯವೇನಿತ್ತು?’ ಎಂದು ವಿಶೇಷ ಅಧಿವೇಶನದಲ್ಲಿ ಕೇಜ್ರಿವಾಲ್, ಕೇಂದ್ರಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಕಾನೂನುಗಳನ್ನು ಬಿಜೆಪಿಯ ಚುನಾವಣೆ ಫಂಡ್‌ಗಾಗಿ ಮಾಡಲಾಗಿದೆ. ರೈತರಿಗಲ್ಲ ಎಂದು ಕೇಜ್ರಿವಾಲ್ಆರೋಪಿಸಿದ್ದಾರೆ.2 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ರಸ್ತೆಯಲ್ಲಿ ಕುಳಿತಿರುವ ರೈತರನ್ನು ನೋಡಿದರೆ ನೋವಾಗುತ್ತದೆ. ನಾನು ಮೊದಲು ಈ ದೇಶದ ನಾಗರಿಕ, ಆಮೇಲೆ ಮುಖ್ಯಮಂತ್ರಿ ಎಂದಿರುವ ಕೇಜ್ರಿವಾಲ್, ರೈತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ, ಆಮ್ ಆದ್ಮಿ ಪಕ್ಷದ ಶಾಸಕರು ಸಹ ಕೃಷಿ ಕಾಯ್ದೆಯ ಪ್ರತಿಗಳನ್ನು ಹರಿದಿದ್ದಾರೆ. ಜೊತೆಗೆ, ಕೇಂದ್ರದ ಕೃಷಿ ಕಾಯ್ದೆಗೆ ಪ್ರತಿಕೂಲವಾಗಿ ಮೂರು ಹೊಸ ಮಸೂದೆಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

"ರೈತ ವಿರೋಧಿಯಾಗಿರುವ ಈ ಕಪ್ಪು ಕಾಯ್ದೆಗಳನ್ನು ನಾವು ತಿರಿಸ್ಕರಿಸುತ್ತೇವೆ," ಎಂದು ಗೋಯಲ್ ಮತ್ತು ಭಾರ್ತಿ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

"ನಾವು ಮೂರೂ ಕಾಯ್ದೆಗಳನ್ನು ವಿರೋಧಿಸುತ್ತೇವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ರೈತರ ಜೊತೆ ನಿಲ್ಲಲಿದೆ," ಎಂದು ಹೊಸ ಮಸೂದೆಗಳನ್ನು ಮಂಡಿಸಿದ ಬಳಿಕ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ. ಈ ಮೂಲಕ ಕೇಂದ್ರದ ಕಾಯ್ದೆಗಳಿಗೆ ಪ್ರತಿಯಾಗಿ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದೆ ಮೂರನೇ ರಾಜ್ಯ(ಕಾಂಗ್ರೆಸ್ ಆಡಳಿತವಿರುವ ಪಂಜಾಬ್, ರಾಜಸ್ಥಾನ ಬಳಿಕ) ದೆಹಲಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT