ಶುಕ್ರವಾರ, ಅಕ್ಟೋಬರ್ 30, 2020
24 °C

ಬಿಹಾರ ಚುನಾವಣೆ: ದೇವೇಂದ್ರ ಫಡಣವಿಸ್‌ಗೆ ಬಿಜೆಪಿ ಉಸ್ತುವಾರಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಪಕ್ಷದ ‌ಹಿರಿಯ ಮುಖಂಡ ದೇವೇಂದ್ರ ಫಡಣವಿಸ್ ಅವರನ್ನು ಬಿಹಾರ ವಿಧಾನಸಭೆ‌ ಚುನಾವಣೆಯ‌ ಉಸ್ತುವಾರಿಯನ್ನಾಗಿ ಬಿಜೆಪಿ ನೇಮಕ‌‌ ಮಾಡಿದೆ. ಪಕ್ಷದ ಅಧ್ಯಕ್ಷ ಜೆ.ಪಿ.‌ ನಡ್ಡಾ ಅವರು ಬುಧವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಬಿಹಾರದಲ್ಲಿ ಅಕ್ಟೋಬರ್ 28ರಿಂದ ನವೆಂಬರ್ ಏಳರವರೆಗೆ ಮೂರು ಹಂತದಲ್ಲಿ ನಡೆಯಲಿರುವ‌ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವು ಸ್ಪರ್ಧೆಗೆ ಇಳಿಯಲಿದೆ. ಜೆಡಿಯು ಮತ್ತು ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ (ಎಲ್ ಜೆಪಿ) ನಡುವೆ ಸೀಟು ಹಂಚಿಕೆ ಗೊಂದಲ‌ ಸೃಷ್ಟಿಯಾಗಿದೆ.‌ ಈ ಗೊಂದಲ ನಿವಾರಣೆಯ ಹೊಣೆ ಫಡಣವಿಸ್ ಹೆಗಲೇರಿದೆ.

ಬಿಹಾರ ವಿಧಾನಸಭಾ ಚುನಾವಣೆ ಕುರಿತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಪಕ್ಷದ ಬಿಹಾರ ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವೀಸ್‌ ಮತ್ತು ಭೂಪೇಂದ್ರ ಯಾದವ್ ಉಪಸ್ಥಿತರಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.

ಸಭೆಗೂ ಮುನ್ನ ಮಾತನಾಡಿರುವ ಬಿಹಾರ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್‌, 'ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಘಟಬಂಧನವು ಬಿಹಾರ ಚುನಾವಣೆಗಳನ್ನು ಎದುರಿಸಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು