ದೆಹಲಿ ಅಬಕಾರಿ ನೀತಿ ಹಗರಣ: ನಾಳೆ ಕವಿತಾ ವಿಚಾರಣೆ

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್‌ಎಸ್‌ನ ವಿಧಾನ ಪರಿಷತ್‌ನ ಸದಸ್ಯೆ ಕೆ.ಕವಿತಾ ಅವರನ್ನು ಸಿಬಿಐ ಡಿಸೆಂಬರ್ 11 ರಂದು ವಿಚಾರಣೆ ನಡೆಸಲಿದೆ.
ಸಿಬಿಐ ವಿಚಾರಣೆಗೂ ಒಂದು ದಿನ ಮುಂಚಿತವಾಗಿ ಕವಿತಾ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಕವಿತಾ ಅವರ ನಿವಾಸದ ಬಳಿ ಕೆಲವು ಭಿತ್ತಿಪತ್ರ ಹಾಗೂ ಫೋಟೊ ಪ್ರದರ್ಶಿಸಿ ಘೋಷಣೆಗಳನ್ನು ಹಾಕಿದರು.
‘ಹೋರಾಟಗಾರರ ಮಗಳು ಎಂದೂ ಭಯ ಪಡುವುದಿಲ್ಲ‘ ’ನಿಮ್ಮ ಜೊತೆ ನಾವಿದ್ದೇವೆ ಕವಿತಕ್ಕ‘ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ. ಕವಿತಾ ಅವರ ನಿವಾಸ ಬಂಜಾರ ಹಿಲ್ಸ್‌ನಲ್ಲಿ ವಿಚಾರಣೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.