ಸೋಮವಾರ, ಜೂನ್ 14, 2021
26 °C

ದೆಹಲಿ: ಕೋವಿಡ್‌ ಪೀಡಿತ ಹಿರಿಯ ನಾಗರಿಕರ ನೆರವಿಗೆ ತಂಡ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19ನಿಂದ ಬಳಲುತ್ತಿರುವ ಹಿರಿಯ ನಾಗರಿಕರು ತೊಂದರೆ ಎದುರಿಸುತ್ತಿರುವ ಸಂದರ್ಭದಲ್ಲಿ, ಅವರಿಗೆ ಸ್ಪಂದಿಸುವ ಸಲುವಾಗಿ ದೆಹಲಿಯ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಿ.ಸಿ.ಮೀನಾ, ಹಿರಿಯ ಸಹಾಯಕ ಕುಮಾರ ಗಂಧರ್ವ, ಕಲ್ಯಾಣಾಧಿಕಾರಿಗಳಾದ ಕುಲದೀಪ್‌ ಸೈನಿ ಹಾಗೂ ವಿಜಯ್  ಈ ತಂಡದಲ್ಲಿದ್ದಾರೆ. ಈ ತಂಡ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ)ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಸಹಾಯವಾಣಿಯನ್ನು ಸಹ (1077) ಸ್ಥಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆಹಾರ ಪೊಟ್ಟಣ ವಿತರಣೆ, ವಸತಿ ಕಲ್ಪಿಸುವುದು, ಔಷಧಿ ತಲುಪಿಸುವುದು, ಮಾಸ್ಕ್‌, ಸ್ಯಾನಿಟೈಜರ್‌ನಂತಹ ಕೋವಿಡ್‌–19ಗೆ ಸಂಬಂಧಿಸಿದ ಪರಿಕರಗಳನ್ನು ಹಿರಿಯ ನಾಗರಿಕರಿಗೆ ತಲುಪಿಸಲು ಸಹ ಈ ಅಧಿಕಾರಿಗಳು ನೆರವಾಗುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು