ಬುಧವಾರ, ಆಗಸ್ಟ್ 10, 2022
20 °C

ವಿದೇಶಕ್ಕೆ ಹೋಗುವವರಿಗಾಗಿ ದೆಹಲಿ ಸರ್ಕಾರದಿಂದ ವಿಶೇಷ ಲಸಿಕಾ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶಾಲಾ ವಿದ್ಯಾರ್ಥಿಗಳು, ಅಥ್ಲೀಟ್‌ಗಳು ಹಾಗೂ ಉದ್ಯೋಗ, ಶಿಕ್ಷಣ ನಿಮಿತ್ತ ವಿದೇಶಗಳಿಗೆ ಪ್ರಯಾಣಿಸುವವರಿಗಾಗಿ ಕೋವಿಡ್‌ ಲಸಿಕೆ ನೀಡಲು ದೆಹಲಿ ಸರ್ಕಾರ ಪ್ರತ್ಯೇಕ ಕೋವಿಡ್‌ ಲಸಿಕಾ ಕೇಂದ್ರವನ್ನು ಆರಂಭಿಸಿದೆ.

ನಗರದ ಮಂದಿರ ಮಾರ್ಗದಲ್ಲಿರುವ ನವಯುಗ್ ಶಾಲೆಯಲ್ಲಿ ತೆರೆದಿರುವ ಈ ಕೇಂದ್ರವನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಿಸೋಡಿಯಾ, ಈ ವಿಭಾಗಗಳ ಅಡಿಯಲ್ಲಿ ಬರುವ ಜನರು ತಮ್ಮ ಮೊದಲ ಶಾಟ್‌ನ ದಿನಾಂಕದಿಂದ 28-84 ದಿನಗಳ ಅಂತರದ ನಂತರ ವಿಶೇಷ ನಿಬಂಧನೆಗಳ ಅಡಿಯಲ್ಲಿ ತಮ್ಮ ಎರಡನೇ ಲಸಿಕೆ ಪ್ರಮಾಣವನ್ನು ಶಿಬಿರದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈ ಮೂರು ವಿಭಾಗಗಳಲ್ಲಿ ಗುರುತಿಸಿಕೊಂಡವರು ಮೊದಲ ಡೋಸ್ ಪಡೆದು 28–84 ದಿನಗಳ ಅಂತರದಲ್ಲಿ ತಮ್ಮ ಎರಡನೇ ಡೋಸ್ ಲಸಿಕೆಯನ್ನು ಈ ಕೇಂದ್ರದಲ್ಲಿ ಪಡೆಯಲು ನೆರವಾಗಲಿದೆ. ವಿಶೇಷ ಲಸಿಕಾ ಕೇಂದ್ರದ ಉದ್ದೇಶವು ವಿದೇಶಕ್ಕೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದಾಗಿದೆ ಎಂದು ಸಿಸೋಡಿಯಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು