ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಓಮೈಕ್ರಾನ್ ದೃಢಪಟ್ಟ 10 ಹೊಸ ಪ್ರಕರಣಗಳು: ಸತ್ಯೇಂದ್ರ‌ ಜೈನ್

Last Updated 17 ಡಿಸೆಂಬರ್ 2021, 7:52 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಇಂದು (ಶುಕ್ರವಾರ) ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ‘ಓಮೈಕ್ರಾನ್’ ದೃಢಪಟ್ಟ ಹತ್ತು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಇದರೊಂದಿಗೆ ದೆಹಲಿಯಲ್ಲಿ ಪತ್ತೆಯಾದ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.

ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದ್ದ 40 ಮಾದರಿಗಳಲ್ಲಿ 10 ವರದಿಗಳು ಪಾಸಿಟಿವ್ ಬಂದಿವೆ. ಸೋಂಕು ಕಾಣಿಸಿಕೊಂಡಿರುವವರು ಬಹುತೇಕರು ವಿದೇಶಗಳಿಂದ ಬಂದಿರುವವರಾಗಿದ್ದಾರೆ ಎಂದು ಜೈನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಓಮೈಕ್ರಾನ್ ಸಮುದಾಯ ಪ್ರಸರಣ ಹಂತವನ್ನು ತಲುಪಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಡಿ.5 ರಂದು ಮೊದಲ ಓಮೈಕ್ರಾನ್ ಪ್ರಕರಣ ಪತ್ತೆಯಾಗಿತ್ತು. ರಾಂಚಿ ಮೂಲದ 37 ವರ್ಷದ ವ್ಯಕ್ತಿಯೊಬ್ಬರು ತಾಂಜೆನಿಯಾದಿಂದ ದೆಹಲಿಗೆ ಬಂದಿಳಿದಿದ್ದರು. ಸದ್ಯ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈಗಾಗಲೇ ಹೆಚ್ಚು ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿರುವ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್‌ವಾನ, ಚೀನಾ, ಘಾನಾ, ತಾಂಜೆನಿಯಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಹಾಂಗ್‌ಕಾಂಗ್ ಹಾಗೂ ಇಸ್ರೇಲ್ ಅನ್ನು ‘ಅಪಾಯದಲ್ಲಿರುವ’ ದೇಶಗಳು ಎಂದು ಪರಿಗಣಿಸಲಾಗಿದೆ.

ಈ ದೇಶಗಳಿಂದ ಬರುವವರು ಭಾರತಕ್ಕೆ ಬಂದ ಕೂಡಲೇ ಹೆಚ್ಚುವರಿ ತಪಾಸಣೆ, ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕಿದೆ. ಓಮೈಕ್ರಾನ್‌ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ.

ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮೈಕ್ರಾನ್‌’ ಎಂದು ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ತೀವ್ರ ಕಳವಳ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT