ಶುಕ್ರವಾರ, ಜನವರಿ 27, 2023
19 °C
ದೀಪಾವಳಿಯ ನಿಮಿತ್ತ ಪಟಾಕಿಗಳಿಂದ ವಾಯುಮಾಲಿನ್ಯ

ದೆಹಲಿ: ಕುಸಿದ ವಾಯುಗುಣಮಟ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ವಾಯುಗುಣಮಟ್ಟವು ಅತ್ಯಂತ ಕಳಪೆ ಗುಣಮಟ್ಟಕ್ಕೆ ಕು‌ಸಿದಿದೆ.

ಪ್ರತಿಕೂಲ ಹವಾಮಾನದ ಜತೆಗೆ ದೆಹಲಿ ಪರಿಸರದಲ್ಲಿ ದೀಪಾವಳಿಯ ಕಾರಣ ಪಟಾಕಿ ಹೆಚ್ಚಿದ್ದರಿಂದ ಮಾಲಿನ್ಯಕಾರಕಗಳ ಶೇಖರಣೆಯೂ ಹೆಚ್ಚಾಗಿದೆ. ಹೀಗಾಗಿ ವಾಯುವಿನ ಗುಣಮಟ್ಟವು ಅತ್ಯಂತ ಕಳಪೆ ಗುಣಮಟ್ಟಕ್ಕೆ ಕುಸಿದಿದೆ. 

ಭಾನುವಾರ ಸಂಜೆ, ದೆಹಲಿಯಲ್ಲಿ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯುಐ) 259ರಷ್ಟು ಇತ್ತು. ಇದು ಕಳೆದ ಏಳು ದೀಪಾವಳಿಯ ಅವಧಿಯಲ್ಲಿ ಅತ್ಯಂತ ಕಡಿಮೆ ವಾಯು ಗುಣಮಟ್ಟ ಎನಿಸಿಕೊಂಡಿದೆ.

ತಾಪಮಾನ ಮತ್ತು ಗಾಳಿ ವೇಗದಲ್ಲಿ ಉಂಟಾದ ಕುಸಿತ ಮತ್ತು ರಾಜಧಾನಿಯ ಹಲವು ಭಾಗಗಳಲ್ಲಿ ಜನರು ಪಟಾಕಿಗಳನ್ನು ಸಿಡಿಸುತ್ತಿರುವುದರಿಂದ ಮಾಲಿನ್ಯದ ಮಟ್ಟವು ಭಾನುವಾರ ರಾತ್ರಿ ಏರಿಕೆಯಾಗಿದೆ.

ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ಎಕ್ಯುಐ ಮಟ್ಟ 301 ತಲುಪಿ, ಗಾಳಿ ಗುಣಮಟ್ಟ ಹದಗೆಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು