ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರ ದೆಹಲಿ ಗಲಭೆ ಪ್ರಕರಣ: ದಿನೇಶ್ ಯಾದವ್‌ಗೆ 5 ವರ್ಷ ಜೈಲು

Last Updated 20 ಜನವರಿ 2022, 11:27 IST
ಅಕ್ಷರ ಗಾತ್ರ

ನವದೆಹಲಿ: ಫೆಬ್ರುವರಿ 2020ರ ಈಶಾನ್ಯ ದೆಹಲಿಯ ಗಲಭೆಗೆ ಸಂಬಂಧಿಸಿದಂತೆ ಮೊದಲ ಅಪರಾಧಿ ದಿನೇಶ್ ಯಾದವ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮನೆಗೆ ಬೆಂಕಿ ಹಚ್ಚಿದ ಗಲಭೆಯ ಗುಂಪಿನ ಭಾಗವಾಗಿದ್ದಕ್ಕಾಗಿ ದಿನೇಶ್ ಅವರನ್ನು ದೋಷಿ ಎಂದು ಕಳೆದ ತಿಂಗಳು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವೀರೇಂದ್ರ ಭಟ್ ಅವರು ತೀರ್ಪು ನೀಡಿದ್ದರು.

ಇದು ಪೌರತ್ವ (ತಿದ್ದುಪಡಿ) ಕಾಯಿದೆಯ ಗಲಭೆ ಪ್ರಕರಣಗಳಲ್ಲಿ ಆದ ಮೊದಲ ಶಿಕ್ಷೆಯಾಗಿದೆ.

ಇದರ ಜೊತೆಗೆ ₹ 12,000 ದಂಡವನ್ನು ಪಾವತಿಸುವಂತೆಯೂ ಯಾದವ್‌ಗೆ ಸೂಚಿಸಲಾಗಿದೆ ಎಂದು ವಿಚಾರಣೆ ವೇಳೆ ಅವರನ್ನು ಪ್ರತಿನಿಧಿಸಿದ್ದ ವಕೀಲ ಶಿಖಾ ಗಾರ್ಗ್ ಹೇಳಿದ್ದಾರೆ. ಶಿಕ್ಷೆಯ ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ, ಯಾದವ್ ‘ಗಲಭೆಯ ಗುಂಪಿನ ಸಕ್ರಿಯ ಸದಸ್ಯ’ಮತ್ತು ಫೆಬ್ರವರಿ 25 ರಂದು ರಾತ್ರಿ ಮನೋರಿ ಎಂಬ 73 ವರ್ಷದ ಮಹಿಳೆಯ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಸುಮಾರು 150-200 ಗಲಭೆಕೋರರ ಗುಂಪೊಂದು ನನ್ನ ಮನೆಯ ಮೇಲೆ ದಾಳಿ ಮಾಡಿ ಮನೆಯ ಎಲ್ಲಾ ವಸ್ತುಗಳು ಮತ್ತು ಎಮ್ಮೆಯನ್ನು ಲೂಟಿ ಮಾಡಿದೆ ಎಂದು ಮನೋರಿ ಆರೋಪಿಸಿದ್ದಾರೆ.

25 ವರ್ಷದ ಯಾದವ್ ಅವರನ್ನು ಜೂನ್ 8, 2020 ರಂದು ಬಂಧಿಸಲಾಗಿತ್ತು. ನ್ಯಾಯಾಲಯವು ಆಗಸ್ಟ್ 3, 2021 ರಂದು ಅವರ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿತ್ತು.

ಫೆಬ್ರುವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯಿದೆಯ ಬೆಂಬಲಿಗರು ಮತ್ತು ವಿರೋಧಿ ಪ್ರತಿಭಟನಾಕಾರರ ನಡುವಿನ ಹಿಂಸಾಚಾರವು ಕೋಮು ಘರ್ಷಣೆಯ ಸ್ವರೂಪ ಪಡೆದುಕೊಂಡಿತ್ತು. ಗಲಭೆಯಲ್ಲಿಕನಿಷ್ಠ 53 ಜನರು ಸಾವನ್ನಪ್ಪಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT