ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳಿಗೆ ಕೋವಿಡ್‌ ಪರೀಕ್ಷೆ: ಪ್ರಯೋಗಾಲಯಕ್ಕೆ ಮಾದರಿ ರವಾನಿಸಿದ ದೆಹಲಿ ಮೃಗಾಲಯ

Last Updated 8 ಮೇ 2021, 8:05 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಕೋವಿಡ್-‌19 ಪರೀಕ್ಷೆ ಸಲುವಾಗಿ ಕೆಲವು ಪ್ರಾಣಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ʼಸಿಂಹ ಸೇರಿದಂತೆ ಕೆಲವು ಪ್ರಾಣಿಗಳ ಮಾದರಿಯನ್ನು ಬರೇಲಿಯಲ್ಲಿರುವಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐವಿಆರ್‌ಐ) ಕಳುಹಿಸಿಕೊಟ್ಟಿದ್ದೇವೆ.ಪ್ರತಿಕೂಲಕರವಾದ ಯಾವುದೇ ಮಾಹಿತಿ ಅಥವಾ ವರದಿ ಈವರೆಗೆ ಬಂದಿಲ್ಲ. ವಿಸ್ತೃತ ವರದಿಗಾಗಿ ಕಾಯುತ್ತಿದ್ದೇವೆʼ ಎಂದು ರಾಷ್ಟ್ರೀಯ ಪ್ರಾಣಿಶಾಸ್ತ್ರೀಯ ಉದ್ಯಾನದ ನಿರ್ದೇಶಕ ರಮೇಶ್‌ ಪಾಂಡೆ ತಿಳಿಸಿದ್ದಾರೆ.

ಮುಂದುವರಿದು, ಕೆಲವು ಮೃಗಾಲಯಗಳಲ್ಲಿನವನ್ಯಮೃಗಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಮಾಹಿತಿ ಬಂದಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಮೃಗಾಲಯದಲ್ಲಿ ಸ್ಯಾನಿಟೈಸೇಷನ್‌ ಕೆಲಸವನ್ನು ನಿಲ್ಲಿಸಿಲ್ಲ ಎಂದೂ ಹೇಳಿದ್ದಾರೆ.

ಉತ್ತರ ಪ್ರದೇಶದ ಎತವಾ ಸಫಾರಿ ಉದ್ಯಾನದಲ್ಲಿ ಎರಡು ಹೆಣ್ಣು ಸಿಂಹಗಳು ಮತ್ತು ಹೈದರಾಬಾದ್‌ನ ನೆಹರೂ ಉದ್ಯಾನವನದಲ್ಲಿನ 8 ಏಷ್ಯಾಟಿಕ್‌ ಸಿಂಹಗಳಿಗೆ ಕೋವಿಡ್‌ ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT