ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಕೊರೊನಾ 2ನೇ ಅಲೆಗೆ 'ಡೆಲ್ಟಾ ರೂಪಾಂತರ‘ ವೈರಸ್ ಕಾರಣ: ಅಧ್ಯಯನ

Last Updated 4 ಜೂನ್ 2021, 9:04 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಹಿಂದೆ ಡೆಲ್ಟಾ ರೂಪಾಂತರ ವೈರಸ್ ಪ್ರಾಥಮಿಕ ಕಾರಣವಾಗಿದೆ ಎಂದು ಐಎನ್‌ಎಸ್‌ಎಸಿಒಜಿ (ಭಾರತದಲ್ಲಿ ಜಿನೋಮ್ ಪರೀಕ್ಷೆ ಕೈಗೊಳ್ಳುವ ಲ್ಯಾಬ್‌ಗಳ ಒಕ್ಕೂಟ) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.

ಹೆಚ್ಚಿನ ಪ್ರಸರಣ ಸಾಮರ್ಥ್ಯವನ್ನು ಹೊಂದಿರುವ ಬಿ .1.617 ರೂಪಾಂತರ ಮತ್ತು ಅದರ ವಂಶಾವಳಿ ಬಿ .1.617.2 ವೈರಸ್, ಆಲ್ಫಾ ರೂಪಾಂತರ (ಬಿ .1.1.7)ಗಿಂತಲೂ ದೇಶದಲ್ಲಿ ಶೇ 50 ರಷ್ಟು ಕೊರೊನಾ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಆದರೆ, ಹೆಚ್ಚಿನ ಸಾವುಗಳಿಗೆ ಡೆಲ್ಟಾ ರೂಪಾಂತರದ ಪಾತ್ರದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗಮನಾರ್ಹವಾಗಿ, ದೇಶದಲ್ಲಿ ಕೋವಿಡ್ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡುವ ಬ್ರಿಟನ್ನಿನ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ), ‘ಆಲ್ಫಾಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರದಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವಿದೆ ಎಂದು ಆರಂಭಿಕ ಪುರಾವೆಗಳು ಸೂಚಿಸುತ್ತವೆ. ಆದರೆ, ಇನ್ನೂ ಹೆಚ್ಚಿನ ಡೇಟಾ ಅಗತ್ಯವಿದೆ’ಎಂದು ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜೀನೋಮಿಕ್ ಸೀಕ್ವೆನ್ಸಿಂಗ್‌ನಿಂದ ಬಹಿರಂಗಪಡಿಸಿದಂತೆ ದೇಶದಲ್ಲಿ 12,200 ಕ್ಕೂ ಹೆಚ್ಚು ಕೊರೊನಾ ರೂಪಾಂತರಗಳಿವೆ ಎಂದು ಭಾರತದ ಅಧ್ಯಯನವು ಹೇಳುತ್ತದೆ, ಆದರೆ, ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಅವುಗಳ ಪರಿಣಾಮವು ತುಂಬಾ ಕಡಿಮೆ ಇದೆ. ಎರಡನೇ ಅಲೆಯಲ್ಲಿ ಪರಿಸ್ಥಿತಿಯನ್ನೇ ಬದಲಾಯಿಸಿದೆ ಎಂದು ಪಿಎಚ್‌ಇ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT