ಡೆಂಗಿ: ದೆಹಲಿಯಲ್ಲಿ 6 ಸಾವು, ಪ್ರಕರಣಗಳ ಸಂಖ್ಯೆ 1,530ಕ್ಕೆ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಡೆಂಗಿಯಿಂದ ಈ ವರ್ಷ ಇನ್ನೂ ಐದು ಮಂದಿ ಸಾವನ್ನಪ್ಪಿದ್ದು ಮರಣ ಸಂಖ್ಯೆ ಆರಕ್ಕೇರಿದೆ. ಡೆಂಗಿ ಪ್ರಕರಣಗಳ ಸಂಖ್ಯೆ 1,530 ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ವರದಿಯೊಂದು ಹೇಳಿದೆ.
ಅಧಿಕೃತ ವರದಿಗಳ ಪ್ರಕಾರ, ಇದು 2017 ರಿಂದ ದೆಹಲಿಯಲ್ಲಿ ಡೆಂಗಿಯಿಂದ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ಅಕ್ಟೋಬರ್ 30 ವರೆಗೆ ದೆಹಲಿಯಲ್ಲಿ ಈ ವರ್ಷ 1,196 ಡೆಂಗಿ ಪ್ರಕರಣಗಳು ದಾಖಲಾಗಿವೆ.
ಅಕ್ಟೋಬರ್ 30 ರವರೆಗೆ ಡೆಂಗಿಯಿಂದ ಆರು ಸಾವುಗಳು ಮತ್ತು 1,537 ಪ್ರಕರಣಗಳು ದಾಖಲಾಗಿವೆ. ಇದು 2018 ಕ್ಕಿಂತ ಹೆಚ್ಚಿನದಾಗಿದೆ ಎಂದು ಸೋಮವಾರ ಬಿಡುಗಡೆಯಾದ ಸಾಂಕ್ರಾಮಿಕ ರೋಗಗಳ ಕುರಿತ ವರದಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.