ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತಿರಲಿಲ್ಲ: ಶಾ ಸ್ಪಷ್ಟನೆ

Last Updated 9 ಫೆಬ್ರುವರಿ 2021, 15:37 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಶಾಂತಿನಿಕೇತನದ ಘನತೆಗೆ ಧಕ್ಕೆ ತಂದಿದ್ದಾರೆಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಧೀರ್‌ ರಂಜನ್‌ ಚೌಧರಿ ಆರೋಪಿಸಿದ್ದರು. ಇದನ್ನು ಅಲ್ಲಗಳೆದಿರುವ ಶಾ ಇಂದು ಲೋಕಸಭೆಯಲ್ಲಿಸ್ಪಷ್ಟನೆ ನೀಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ಇನ್ನೂ ಕೆಲವು ರಾಜಕೀಯ ನಾಯಕರು ʼಸಂದರ್ಶಕರ ಪುಸ್ತಕʼಕ್ಕೆ ಸಹಿ ಮಾಡುವಾಗ ಕಿಟಿಕಿ ಪಕ್ಕದಲ್ಲಿ ಕುಳಿತಿರುವ ವಿಡಿಯೊಗಳು, ಚಿತ್ರಗಳು ಇವೆ ಎನ್ನುತ್ತಾ, ʼನಾನು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತಿರಲಿಲ್ಲ. ನಾನು ಯಾರೊಬ್ಬರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆʼ ಎಂದುತಿಳಿಸಿದ್ದಾರೆ.

ಶಾಂತಿನಿಕೇತನದ ಉಪಕುಲಪತಿಯರು ಬರೆದ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಶಾ, ಅಲ್ಲಿಗೆ ಭೇಟಿ ನೀಡಿದ್ದ ವೇಳೆ ತಮ್ಮಿಂದ ಯಾವುದೇ ರೀತಿಯ ಉಲ್ಲಂಘನೆಯಾಗಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಉಪಕುಲಪತಿಯವರು, ʼಅಮಿತ್‌ ಶಾ ಅವರು ಜನವರಿ 20, 2021ರಂದು ಶಾಂತಿನಿಕೇತನ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ವೇಳೆ ಗುರುದೇವ ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತಿದ್ದರು ಎಂದು ನೀವು ಲೋಕಸಭೆಯಲ್ಲಿ ಇಂದು (ಫೆ.8 ರಂದು) ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪತ್ರವಿದುʼ ಎಂದು ಉಲ್ಲೇಖಿಸಿಚೌಧರಿಯವರಿಗೂ ಸೋಮವಾರಪತ್ರ ಬರೆದಿದ್ದಾರೆ.

ʼದುರದೃಷ್ಠವಶಾತ್ ನೀವು (ಅಧೀರ್‌ ರಂಜನ್‌ ಚೌಧರಿ) ತಪ್ಪು ಮಾಹಿತಿ ನೀಡಿದ್ದೀರಿ. ಏಕೆಂದರೆ ಇದು ನಿಜವಾಗಿಯೂ ಸುಳ್ಳು. ಈ ಹಿಂದೆ ಉಪಕುಲಪತಿಗಳು, ಪಂಡಿತ್‌ ಜವಾಹರ್‌ಲಾಲ್‌ ನೆಹರು, ಮೇಡಂ ಸೇಖ್‌ ಹಸೀನಾ (ಬಾಂಗ್ಲಾದೇಶ ಪ್ರಧಾನಿ) ಸೇರಿದಂತೆ ಸಾಕಷ್ಟು ಗಣ್ಯರು ಕಿಟಕಿಯ ಅಂಚಿನಲ್ಲಿ ಇರಿಸಲಾಗಿರುವ ತಾತ್ಕಾಲಿಕ ಕುರ್ಚಿಯಲ್ಲಿ ಕುಳಿತಿದ್ದರುʼ ಎಂದು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನೂ ಈಗಾಗಲೇ ನಿಮ್ಮವಾಟ್ಸ್ಆ್ಯಪ್‌ನೊಂದಿಗೆಹಂಚಿಕೊಂಡಿದ್ದೇನೆ ಎಂದೂ ಹೇಳಿರುವ ಅವರು, ʼಅದು ಎಂದಿಗೂ ಗುರುದೇವ್‌ (ಟ್ಯಾಗೋರ್)ಅವರ ಆಸನವಾಗಿರಲಿಕ್ಕೆ ಸಾಧ್ಯವಿಲ್ಲʼ ಎಂದು ತಿಳಿಸಿದ್ದಾರೆ.

ಬಿರ್ಧುಮ್‌ ಜಿಲ್ಲೆಯಲ್ಲಿರುವ ಶಾಂತಿನಿಕೇತನಕ್ಕೆಜನವರಿ 20 ರಂದುಭೇಟಿ ನೀಡಿದ್ದ ಸಚಿವಅಮಿತ್‌ ಶಾ, ಟ್ಯಾಗೋರ್‌ ಅವರಿಗೆ ಗೌರವ ಸಮರ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT