ನವದೆಹಲಿ: ಕೋವಿಡ್–19 ಲಸಿಕೆಯನ್ನು ರಾಜ್ಯಗಳಿಗೆ ಪಾರದರ್ಶಕವಾದ ಕ್ರಮದಲ್ಲಿಯೇ ಹಂಚಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. ರಾಜ್ಯವಾರು ಜನಸಂಖ್ಯೆ, ಪ್ರಕರಣಗಳು, ಪರಿಣಾಮಕಾರಿ ಬಳಕೆ, ಪೋಲು ಪ್ರಮಾಣವನ್ನು ಆಧರಿಸಿ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದೆ.

ಪಾರದರ್ಶಕವಲ್ಲದ ರೀತಿಯಲ್ಲಿ ರಾಜ್ಯಗಳಿಗೆ ಲಸಿಕೆಯನ್ನು ಪೂರೈಕೆಯಾಗಿದೆ ಎಂದು ಕೇಳಿಬಂದಿರುವ ಆರೋಪವು ಆಧಾರರಹಿತ ಹಾಗೂ ಮಾಹಿತಿಯ ಕೊರತೆಯಿಂದ ಕೂಡಿದ್ದಾಗಿದೆ ಎಂದೂ ಸಚಿವಾಲಯವು ತಿಳಿಸಿದೆ.

ಈ ಕುರಿತ ಹೇಳಿಕೆಯಲ್ಲಿ, ವೈಜ್ಞಾನಿಕ ಮತ್ತು ಪಿಡುಗಿನ ಸ್ವರೂಪ ಆಧರಿಸಿ ಹಾಗೂ ಡಬ್ಲ್ಯೂಎಚ್‌ಒ ಮಾರ್ಗದರ್ಶಿ ಸೂತ್ರಕ್ಕೆ ಅನುಸಾರವಾಗಿ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನ ರೂಪಿಸಲಾಗಿದೆ ಎಂದಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ವೇಗ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: ಸೋನಿಯಾ ಸೂಚನೆ | Prajavani

ವ್ಯವಸ್ಥಿತವಾಗಿ ಲಸಿಕೆ ಅಭಿಯಾನವನ್ನು ಕಾರ್ಯಗತಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಭಾಗವಹಿಸುವಿಕೆ ಆಧಾರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.