ಬುಧವಾರ, ಏಪ್ರಿಲ್ 14, 2021
24 °C

ಡಿಎನ್‌ಎ ಸಹಾಯದಿಂದ 16 ತಿಂಗಳ ನಂತರ ಮೃತ ವ್ಯಕ್ತಿಯ ಕುಟುಂಬ ಪತ್ತೆ ಮಾಡಿದ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಾಲ್ಘಾರ್: ಇಲ್ಲಿನ ರೈಲ್ವೆ ಪೊಲೀಸರು, ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಹದಿನಾರು ತಿಂಗಳ ನಂತರ, ಡಿಎನ್‌ಎ ಮಾದರಿಯ ವಿಶ್ಲೇಷಣೆ ಮೂಲಕ ಆ ವ್ಯಕ್ತಿಯ ಕುಟುಂಬವನ್ನು ಪತ್ತೆ ಮಾಡಿದ್ದಾರೆ.

ಪಾಲ್ಘಾರ್ ಮತ್ತು ಬೋಯಿಸಾರ್ ರೈಲ್ವೆ ನಿಲ್ದಾಣಗಳ ನಡುವಿನ ಹಳಿಯ ಮೇಲೆ 2019ರಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತಪಟ್ಟ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮೃತ ವ್ಯಕ್ತಿಯ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಮುಂಬೈನ ಪ್ರಯೋಗಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು.

ಪೊಲೀಸರು ಈ ವ್ಯಕ್ತಿಯ ಕುಟುಂಬದವರನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದರು. ರೈಲ್ವೆ ಸ್ಟೇಷನ್‌ಗಳ ಆಸುಪಾಸಿನ ಹಳ್ಳಿಗಳಿಗೆ ಭೇಟಿ ನೀಡಿ, ‘ನಿಮ್ಮ ಮನೆಯಲ್ಲಿ ಯಾರಾದರೂ ನಾಪತ್ತೆಯಾಗಿದ್ದಾರಾ‘ ಎಂದು ವಿಚಾರಿಸುತ್ತಿದ್ದರು.

ತನಿಖೆಯ ಸಂದರ್ಭದಲ್ಲಿ 58 ವರ್ಷದ ಕಾರ್ಮಿಕರೊಬ್ಬರು, ‘ನನ್ನ ಮಗ ನಾಪತ್ತೆಯಾಗಿದ್ದಾನೆ‘ ಎಂದು ಹೇಳಿದರು. ಪೊಲೀಸರು ಆ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆ ಮತ್ತು ಡಿಎನ್‌ಎ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.

‘ಐದಾರು ದಿನಗಳ ನಂತರ, ಪ್ರಯೋಗಾಲಯದವರು ಮೃತ ವ್ಯಕ್ತಿ ಮತ್ತು ಈ ಕಾರ್ಮಿಕನ ಡಿಎನ್‌ಎ ಮಾದರಿಗಳು ಹೊಂದಿಕೆಯಾಗುತ್ತಿವೆ. ಈ ಪ್ರಕಾರ, ಮೃತ ವಕ್ತಿಯು ಆ ಕಾರ್ಮಿಕನ ಮಗ ಎಂದು ಮಾಹಿತಿ ನೀಡಿದರು‘ ಎಂದು ಪಾಲ್ಘಾರ್‌ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್‌ ಯೋಗೇಶ್ ಆತ್ಮರಾಮ್ ದೇವಾರೆ ತಿಳಿಸಿದ್ದಾರೆ.

‘ಈ ವಿಷಯವನ್ನು ಮೃತ ವ್ಯಕ್ತಿಯ ಕುಟುಂಬದವರಿಗೆ ತಿಳಿಸಿದ್ದೇವೆ‘ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು