‘ಡ್ರಗ್ಸ್ಗೆ ಗುಜರಾತ್ ಹೆಬ್ಬಾಗಿಲು’: ಮೋದಿ, ಶಾ ಮೌನ ಪ್ರಶ್ನಿಸಿದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಅವರ ಕಣ್ಗಾವಲಿನಲ್ಲಿರುವ ದೇಶಕ್ಕೆ ‘ಡ್ರಗ್ಸ್ ಪೂರೈಕೆಯ ಹೆಬ್ಬಾಗಿಲು’ ಆಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ರಾಜ್ಯದ ಮುಂದ್ರಾ ಮತ್ತು ಪುಪವಾವ್ ಸೇರಿ ಹಲವು ಬಂದರುಗಳ ಮೂಲಕ ದೇಶಕ್ಕೆ ಮಾದಕ ದ್ರವ್ಯ (ಡ್ರಗ್ಸ್) ಪೂರೈಕೆಯಾಗುತ್ತಿದೆ. ಗುರುವಾರವಷ್ಟೇ ಇರಾನ್ನಿಂದ ಮುಂದ್ರಾ ಬಂದರಿಗೆ ಬಂದ ₹500 ಕೋಟಿ ಮೌಲ್ಯದ 52 ಕೆ.ಜಿ ಕೊಕೇನ್ ಅನ್ನು ಎನ್ಸಿಬಿ ವಶಪಡಿಸಿಕೊಂಡಿದೆ.
ಇದರ ಬಗ್ಗೆ ಮೋದಿ ಮತ್ತು ಅಮಿತ್ ಶಾ ಒಂದೇ ಒಂದು ಮಾತು ಆಡದೆ, ಮೌನವಹಿಸಿರುವುದೇಕೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ್ ಪ್ರಶ್ನಿಸಿದ್ದಾರೆ.
ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣಿಕ್ಕಿರುವ ತನಿಖಾ ಸಂಸ್ಥೆಗಳೂ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.