ಮಂಗಳವಾರ, ಜನವರಿ 18, 2022
23 °C

ಒಡಿಶಾ: ಹಳಿತಪ್ಪಿದ ದುರಂತೊ ಎಕ್ಸ್‌ಪ್ರೆಸ್, ಹಾನಿ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಹರಿದಾಸ್‌ಪುರ ರೈಲು ನಿಲ್ದಾಣದಲ್ಲಿ ದುರಂತೊ ಎಕ್ಸ್‌ಪ್ರೆಸ್‌ನ ಪಾರ್ಸೆಲ್ ವ್ಯಾನ್‌ನ ಕನಿಷ್ಠ ಎರಡು ಚಕ್ರಗಳು ಶುಕ್ರವಾರ ಹಳಿತಪ್ಪಿದ್ದು, ಯಾರಿಗೂ ಯಾವುದೇ ಗಾಯವಾಗಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್‌) ತಿಳಿಸಿದೆ.

‘ಯಶವಂತಪುರ- ಹೌರಾ (12246) ದುರಂತೊ ಎಕ್ಸ್‌ಪ್ರೆಸ್‌ನ ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್‌ನ ಎರಡು ಮುಂಭಾಗದ ಚಕ್ರಗಳು ಬೆಳಿಗ್ಗೆ 11.14ಕ್ಕೆ ಹರಿದಾಸ್‌ಪುರ ರೈಲು ನಿಲ್ದಾಣದ ಯಾರ್ಡ್ ಮೂಲಕ ಹಾದು ಹೋಗುತ್ತಿದ್ದಾಗ ಹಳಿತಪ್ಪಿವೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ’ ಎಂದು ಇಸಿಒಆರ್‌ ಹೇಳಿಕೆಯಲ್ಲಿ ತಿಳಿಸಿದೆ.

‘ಎಲ್ಲಾ ಪ್ರಯಾಣಿಕರ ಬೋಗಿಗಳನ್ನು ಮತ್ತೊಂದು ಎಂಜಿನ್‌ನೊಂದಿಗೆ ಜೋಡಿಸಿ ಕಳುಹಿಸಲಾಗುತ್ತದೆ’ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು