ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದ ಬಿಕಾನೆರ್‌ನಲ್ಲಿ ಭೂಕಂಪ; 5.3ರಷ್ಟು ತೀವ್ರತೆ

ಅಕ್ಷರ ಗಾತ್ರ

ನವದೆಹಲಿ: ಬುಧವಾರ ಬೆಳಗಿನ ಜಾವ ದೇಶದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ರಾಜಸ್ಥಾನದ ಬಿಕಾನೆರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.

ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರದ (ಎನ್‌ಸಿಎಸ್‌) ಪ್ರಕಾರ, ಬಿಕಾನೆರ್‌ನಲ್ಲಿ ಬೆಳಗಿನ ಜಾವ 5:24ಕ್ಕೆ ಭೂಕಂಪ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು–ನೋವು ಅಥವಾ ಆಸ್ತಿ–ಪಾಸ್ತಿಗೆ ಹಾನಿಯಾಗಿಲ್ಲ.

ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್‌ ಮತ್ತು ಲಡಾಖ್‌ ಪ್ರದೇಶಗಳಲ್ಲಿ ಕ್ರಮವಾಗಿ ಬೆಳಗಿನ ಜಾವ 2:10 ಮತ್ತು 4:57ಕ್ಕೆ ಭೂಮಿ ಕಂಪಿಸಿದೆ. ಪಶ್ಚಿಮ ಗಾರೊ ಹಿಲ್ಸ್‌ನಲ್ಲಿ 4.1ರಷ್ಟು ಹಾಗೂ ಲೆಹ್‌– ಲಡಾಖ್‌ನಲ್ಲಿ 3.6ರಷ್ಟು ತೀವ್ರತೆ ಲಘು ಭೂಕಂಪನ ದಾಖಲಾಗಿರುವುದಾಗಿ ಎನ್‌ಸಿಎಸ್‌ ಪ್ರಕಟಿಸಿದೆ.

ಜುಲೈ 15ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಲಘು ಭೂಕಂಪನ ಸಂಭವಿಸಿತ್ತು. ಆಗ ರಿಕ್ಟರ್‌ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT