ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚ ರಾಜ್ಯಗಳ ಚುನಾವಣೆ: ಭೌತಿಕ ಸಭೆಯಲ್ಲಿ 1000 ಮಂದಿಗೆ ಅನುಮತಿ

Last Updated 31 ಜನವರಿ 2022, 13:47 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಲ್ಲಿ ರೋಡ್ ಶೋ, ಪಾದಯಾತ್ರೆ, ವಾಹನ ರ‍್ಯಾಲಿ ಮತ್ತು ಮೆರವಣಿಗೆಗಳ ಮೇಲಿನ ನಿಷೇಧವನ್ನು ಫೆಬ್ರುವರಿ 11ರವರೆಗೆ ವಿಸ್ತರಿಸಿ ಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿದೆ.

ಆದರೆ ಭೌತಿಕ ಸಾರ್ವಜನಿಕ ಸಭೆಗಳಿಗೆ ಗರಿಷ್ಠ 1000 ಮಂದಿ ಮತ್ತು ಮನೆ-ಮನೆ ಪ್ರಚಾರದಲ್ಲಿ ಅನುಮತಿಸಲಾದ ಜನರ ಸಂಖ್ಯೆಯನ್ನು 10ರಿಂದ 20ಕ್ಕೆ ಹೆಚ್ಚಿಸಿ ಅನುಮತಿ ಕಲ್ಪಿಸಲಾಗಿದೆ.

ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್, ಅನೂಪ್ ಚಂದ್ರ ಪಾಂಡೆ ಅವರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಚುನಾವಣೆ ನಡೆಯಲಿರುವರಾಜ್ಯಗಳಾದ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಈಗಿನ ಪರಿಸ್ಥಿತಿಯನ್ನು ಮರುಪರಿಶೀಲಿಸಿದ ಬಳಿಕ ನಿರ್ಧಾರವನ್ನು ಪ್ರಕಟಿಸಿದರು.

ಫೆಬ್ರುವರಿ 11ರವರೆಗೆ ಯಾವುದೇ ರೋಡ್ ಶೋ, ಪಾದಯಾತ್ರೆ, ಸೈಕಲ್/ಬೈಕ್/ವಾಹನ ರ‍್ಯಾಲಿ ಹಾಗೂ ಮೆರವಣಿಗಳಿಗೆ ಅನುಮತಿ ನೀಡಲಾಗುವುದಿಲ್ಲಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭೌತಿಕ ಸಾರ್ವಜನಿಕ ಸಭೆಗಳಲ್ಲಿ ಈಗಿರುವ 500 ಜನರ ಬದಲಿಗೆ ಗರಿಷ್ಠ 1000 ಜನರಿಗೆ ಅಥವಾ ಮೈದಾನ ಸಾಮರ್ಥ್ಯದ ಶೇ 50ರಷ್ಟು ಭರ್ತಿಗೆ ಅನುಮತಿ ನೀಡಲಾಗಿದೆ. ಈ ನಿಮಯವು ಫೆಬ್ರುವರಿ 1ರಿಂದ ಅನ್ವಯವಾಗಲಿದೆ. ಹಾಗೆಯೇ ಒಳಾಂಗಣ ಸಭೆಯಲ್ಲಿ 500 ಮಂದಿಗೆ ಸೇರುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT