ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ ರಾವುತ್‌ಗೆ ₹1 ಕೋಟಿ: ಇ.ಡಿ ಆರೋಪ

Last Updated 1 ಆಗಸ್ಟ್ 2022, 21:01 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಹೌಸಿಂಗ್ ಡೆವಲಪ್‌ಮೆಂಟ್ ಯೋಜನೆಯಲ್ಲಿ ನಡೆದಿರುವಅವ್ಯವಹಾರದಿಂದ ಶಿವಸೇನಾ ಸಂಸದ ಸಂಜಯ ರಾವುತ್ ಹಾಗೂ ಅವರ ಕುಟುಂಬಕ್ಕೆ ₹1.06 ಕೋಟಿ ಸಿಕ್ಕಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ. ಅವ್ಯವಹಾರ ನಡೆಸಿ ಈ ಅಕ್ರಮ ಸಂಪತ್ತು ಗಳಿಸಲಾಗಿದೆ ಎಂದು ವಿಶೇಷ ಕೋರ್ಟ್‌ಗೆ ಮಾಹಿತಿ ನೀಡಿದೆ.

ಪಾತ್ರಾ ಚಾಳ್‌ ಯೋಜನೆಯಲ್ಲಿ ಪುನರ್‌ ಅಭಿವೃದ್ಧಿ ಕೆಲಸ ನಡೆಸಲು ಗುರು ಆಶಿಶ್ ಕನ್‌ಸ್ಟ್ರಕ್ಷನ್ ಕಂಪನಿಯು ಅನುಮೋದನೆ ಪಡೆದಿತ್ತು. ₹1,039.79 ಕೋಟಿಯ ಯೋಜನೆ ಇದಾಗಿತ್ತು. ರಾವುತ್ ಹಾಗೂ ಅವರ ಕುಟುಂಬ ₹1.06 ಕೋಟಿ ಹಣ ಪಡೆದಿದೆ ಎಂದು ಇ.ಡಿ. ಆರೋಪಿಸಿದೆ.

ಈ ಕಂಪನಿಯ ನಿರ್ದೇಶಕ ಪ್ರವೀಣ್ ರಾವುತ್ ಅವರನ್ನು ಇ.ಡಿ. ಈಗಾಗಲೇ ಬಂಧಿಸಿದೆ.ಆದರೆ, ತಮ್ಮ ವಿರುದ್ಧ ಇ.ಡಿ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಸಂಜಯ ರಾವುತ್, ರಾಜಕೀಯ ಷಡ್ಯಂತ್ರದಿಂದ ಆರೋಪ ಮಾಡಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT