ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ಸಂಸದನ ₹89 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಆದೇಶ

Last Updated 12 ಸೆಪ್ಟೆಂಬರ್ 2020, 12:15 IST
ಅಕ್ಷರ ಗಾತ್ರ

ನವದೆಹಲಿ: ಡಿಎಂಕೆ ಸಂಸದ ಎಸ್‌.ಜಗತ್‌ರಕ್ಷಕನ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ₹89.19 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಆದೇಶಿಸಿದೆ.

‘ಜಗತ್‌ರಕ್ಷಕನ್‌ ಹಾಗೂ ಅವರ ಕುಟುಂಬದವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ್ದಾರೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಇಡಿ ಪ್ರಕಟಣೆ ತಿಳಿಸಿದೆ.‌

‘ಜಗತ್‌ರಕ್ಷಕನ್‌ ಹಾಗೂ ಅವರ ಮಗ ಸಂದೀಪ್‌ ಆನಂದ್‌ ಅವರು ಸಿಂಗಪುರ ಮೂಲದ ಸಿಲ್ವರ್‌ ಪಾರ್ಕ್‌ ಇಂಟರ್‌ನ್ಯಾಷನಲ್‌ ಪ್ರೈ.ಲಿ.ಕಂಪನಿಯಿಂದ ಕ್ರಮವಾಗಿ 70 ಲಕ್ಷ ಹಾಗೂ 20 ಲಕ್ಷ ಷೇರು ಪಡೆದುಕೊಂಡಿದ್ದಾರೆ. ಇದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅನುಮೋದನೆ ಪಡೆದಿಲ್ಲ. ಫೆಮಾ ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಾಗ ಈ ವಿಷಯ ಗೊತ್ತಾಗಿದೆ’ ಎಂದು ಇ.ಡಿ. ಹೇಳಿದೆ.

‘ಅನಧಿಕೃತವಾಗಿ ಪಡೆದುಕೊಂಡ ಷೇರುಗಳನ್ನು ಜಗತ್‌ರಕ್ಷಕನ್‌ ತಮ್ಮ ಕುಟುಂಬದ ಸದಸ್ಯರಿಗೆ ವರ್ಗಾಯಿಸಿದ್ದಾರೆ. ಫೆಮಾ ಕಾಯ್ದೆಯ ಸೆಕ್ಷನ್‌ 37ಎ ಅಡಿಯಲ್ಲಿ ಜಗತ್‌ರಕ್ಷಕನ್‌ ಹಾಗೂ ಅವರ ಕುಟುಂಬ ತಮಿಳುನಾಡಿನಲ್ಲಿ ಹೊಂದಿರುವ ಕೃಷಿ ಭೂಮಿ, ಪ್ಲ್ಯಾಟ್‌, ಮನೆ ಹಾಗೂ ಅವರ ಬ್ಯಾಂಕ್‌ ಖಾತೆಯಲ್ಲಿರುವ ಹಣ, ಷೇರು ಒಳಗೊಂಡಂತೆ ₹89.19 ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದ ತನಿಖೆಯು ಮುಂದುವರಿಯಲಿದೆ’ ಎಂದೂ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT