ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಉಸಿರಾಟದ ಸಮಸ್ಯೆ: ಏಮ್ಸ್‌ಗೆ ದಾಖಲು

Last Updated 1 ಜೂನ್ 2021, 11:43 IST
ಅಕ್ಷರ ಗಾತ್ರ

ನವದೆಹಲಿ: ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಮ್ಲಜನಕ ಮಟ್ಟವು ಕಡಿಮೆಯಾದ ಕಾರಣ ಚಿಕಿತ್ಸೆಗಾಗಿ ಇಲ್ಲಿನ ಏಮ್ಸ್‌ಗೆ ಮಂಗಳವಾರ ದಾಖಲಿಸಲಾಗಿದೆ.

61 ವರ್ಷದ ಸಚಿವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ಸಚಿವರ ಕಚೇರಿಯು ತಿಳಿಸಿದೆ. ಅವರಿಗೆ ಏಪ್ರಿಲ್‌ 21ರಂದು ಕೋವಿಡ್‌ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ನಂತರ ಕೆಲ ವಾರ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದು, 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಸಂಬಂಧ ಸಭೆಯನ್ನು ನಡೆಸಿದ್ದರು. ಈಗ ಕೋವಿಡ್‌ ನಂತರದ ಸಮಸ್ಯೆಗಳು ಕಾಣಿಸಿಕೊಂಡಿವೆ.

ಶಿಕ್ಷಣ ಸಚಿವಾಲಯವು ಸದ್ಯ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುವ ಸಿದ್ಧತೆಯಲ್ಲಿದೆ. ಪರೀಕ್ಷೆ ಕುರಿತಂತೆ ಜೂನ್‌ 3ರಂದು ತೀರ್ಮಾನ ಪ್ರಕಟಿಸಲಾಗುವುದು ಎಂದು ಸಚಿವಾಲಯವು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT