ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Vaccine Update | 2021ರ ಮಾರ್ಚ್ ಒಳಗೆ ಲಸಿಕೆ ಲಭ್ಯತೆ ಸಾಧ್ಯತೆ

Last Updated 19 ಸೆಪ್ಟೆಂಬರ್ 2020, 1:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧೆಡೆ ನಡೆಯುತ್ತಿರುವ ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ಬಂದರೆ, 2021ರ ಮೊದಲರ್ಧದ ಒಳಗೆಕೋವಿಡ್ ಲಸಿಕೆಗಳು ಜನಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಎಂದು ಕೇಂದ್ರಆರೋಗ್ಯ ಸಚಿವ (ರಾಜ್ಯ ಖಾತೆ) ಅಶ್ವಿನಿ ಚೌಬೆ ರಾಜ್ಯಸಭೆಗೆ ಶುಕ್ರವಾರ ತಿಳಿಸಿದರು.

ಕೋವಿಡ್ ಲಸಿಕೆಗಳು ಎಂದಿನಿಂದ ದೇಶದಲ್ಲಿ ಮಾರಾಟಕ್ಕೆ ಸಿಗಬಹುದು ಎಂಬಪ್ರಶ್ನೆಗೆ ಉತ್ತರಿಸಿದರು ಅವರು, 'ಯಾವುದೇ ಲಸಿಕೆ ತಯಾರಿಕರೊಂದಿಗೆ ಈವರೆಗೆ ಖರೀದಿ ಒಪ್ಪಂದ ಮಾಡಿಕೊಂಡಿಲ್ಲ' ಎಂದು ಮಾಹಿತಿ ನೀಡಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್ ಕಂಪನಿಗಳು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ಗಳು ಮುಗಿದಿವೆ. ಎರಡೂ ಲಸಿಕೆಗಳು ಸುರಕ್ಷಿತ ಎಂಬುದು ಖಾತ್ರಿಯಾಗಿದೆ. ಇದೀಗ ಈ ಲಸಿಕೆಗಳ ಇಮ್ಯುನೊಜೆನಿಸಿಟಿ (ರೋಗ ನಿರೋಧಕ ಸಾಮರ್ಥ್ಯವೃದ್ಧಿ) ಪರೀಕ್ಷೆಗಳು ಮತ್ತು 2ನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳು ಆರಂಭವಾಗಿವೆ ಎಂದು ಹೇಳಿದರು.

ಪುಣೆಯ ಸಿರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಗಿನ್ನೊವಾ ಬಯೊ ಫಾರ್ಮಾಸಿಟಿಕಲ್ಸ್‌ ಲಿಮಿಟೆಡ್,ಅಹಮದಾಬಾದ್‌ನ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್, ಹೈದರಾಬಾದ್‌ನ ಭಾರತ್ ಬಯೊಟೆಕ್ ಇಂಟರ್‌ನ್ಯಾಷನಲ್ ಮತ್ತು ಅರಬಿಂದೊ ಫಾರ್ಮಾ,ಮುಂಬೈನ ರಿಲಯನ್ಸ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಡೆಟ್ ಕಂಪನಿಗಳಿಗೆಕೇಂದ್ರ ಔಷಧ ಗುಣಮಟ್ಟ ನಿಯಂತ್ರಕರ ಸಂಸ್ಥೆಯು ಪ್ರಿಕ್ಲಿನಿಕಲ್ ಟೆಸ್ಟ್, ತಪಾಸಣೆ ಮತ್ತು ವಿಶ್ಲೇಷಣೆ ನಡೆಸಲು ಅನುಮತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಈ ಸಂಶೋಧನೆಗಳಿಗೆ ಅಗತ್ಯ ನೆರವು ನೀಡುತ್ತಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT