ಬುಧವಾರ, ನವೆಂಬರ್ 30, 2022
17 °C

85 ಲಕ್ಷ ಚಂದಾದಾರರನ್ನು ಹೊಂದಿದ್ದ 8 ಯೂಟ್ಯೂಬ್ ಚಾನಲ್ ನಿಷೇಧ: ಯಾವುವು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಳ್ಳು ಸುದ್ದಿ ಹಾಗೂ ದೇಶದ ಭದ್ರತೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದ ಭಾರತದ 7 ಮತ್ತು ಪಾಕಿಸ್ತಾನದ 1 ಯೂಟ್ಯೂಬ್ ಚಾನಲ್‌ಗಳನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಗುರುವಾರ ನಿಷೇಧಿಸಲಾಗಿದೆ.

ಗೂಗಲ್ ಒಡೆತನದ ಯೂಟ್ಯೂಬ್ ಸರ್ಕಾರದ ಆದೇಶದ ಅನ್ವಯ ಈ ಕ್ರಮ ಕೈಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸಾರ ಇಲಾಖೆ ತಿಳಿಸಿದೆ.

ನಿಷೇಧಕ್ಕೊಳಗಾದ ಈ 8 ಚಾನಲ್‌ಗಳು ತಪ್ಪು ಮಾಹಿತಿ, ದ್ವೇಷ ಹರಡುವಿಕೆ, ರಾಷ್ಟ್ರೀಯ ಭದ್ರತೆ ಬಗ್ಗೆ ಸವಾಲು, ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವುದನ್ನು, ಕೋಮು ಭಾವನೆ ಕೆರಳಿಸುವುದನ್ನು, ವಿದೇಶಾಂಗ ನೀತಿಗೆ ದಕ್ಕೆ ತರುವುದನ್ನು ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ.

ನಿಷೇಧಕ್ಕೊಳಗಾಗಿರುವ ಈ ಎಂಟೂ ಚಾನಲ್‌ಗಳು ಸುಮಾರು 85 ಲಕ್ಷ ಚಂದಾದಾರರನ್ನು ಹೊಂದಿದ್ದು, ಇಲ್ಲಿವರೆಗೆ 114 ಕೋಟಿ ವೀಕ್ಷಣೆಗಳನ್ನು ಪಡೆದಿರುವುದು ಗಮನಾರ್ಹ.

ನಿಷೇಧಕ್ಕೆ ಒಳಗಾದ ಚಾನಲ್‌ಗಳು

ಲೋಕತಂತ್ರ ಟಿ.ವಿ –12 ಲಕ್ಷ ಚಂದಾದಾರರು

ಯು ಆ್ಯಂಡ್ ವಿ ಟಿವಿ– 10.20 ಲಕ್ಷ ಚಂದಾದಾರರು

ಎಎಂ ರಾಜ್ವಿ ಚಾನಲ್– 95000 ಚಂದಾದಾರರು

ಗೌರವಶಾಲಿ– 7 ಲಕ್ಷ ಚಂದಾದಾರರು

ಸೀಟಾಪ್ 5ಟಿಎಚ್– 20 ಲಕ್ಷ ಚಂದಾದಾರರು

ಸರ್ಕಾರಿ ಅಪ್ಡೇಟ್– 90 ಸಾವಿರ ಚಂದಾದಾರರು

ಸಬ್‌ ಕುಚ್ ದೇಕೊ– 20 ಲಕ್ಷ ಚಂದಾದಾರರು

ನ್ಯೂಸ್ ಕಿ ದುನಿಯಾ (ಪಾಕಿಸ್ತಾನದ ಚಾನಲ್)– 20 ಲಕ್ಷ ಚಂದಾದಾರರು

ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು