ಮಂಗಳವಾರ, ಏಪ್ರಿಲ್ 20, 2021
27 °C

ತಮಿಳುನಾಡು ವಿಧಾನಸಭಾ ಚುನಾವಣೆ: ಮುಗಿಯದ ಡಿಎಂಕೆ ಸೀಟು ಹಂಚಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ವಿಧಾನಸಭಾ ಚುನಾವಣೆಗೆ ಕ್ಷೇತ್ರಗಳ ಹಂಚಿಕೆಯಲ್ಲಿ ಮಿತ್ರಪಕ್ಷ ಡಿಎಂಕೆ ತೆಗೆದುಕೊಂಡ ಕಠಿಣ ನಿಲುವು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ತಮಿಳುನಾಡು ಕಾಂಗ್ರೆಸ್ ಸಮಿತಿಯು (ಟಿಎನ್‌ಸಿಸಿ) ಗುರುವಾರ ತನ್ನ ನಾಯಕರೊಂದಿಗೆ ತೀವ್ರ ಸಮಾಲೋಚನೆ ನಡೆಸಿತು.

25ಕ್ಕಿಂತ ಹೆಚ್ಚು ಸ್ಥಾನಗಳು ಸಿಗುವುದಿಲ್ಲ ಎಂದಾದರೆ ಮೈತ್ರಿಯಿಂದ ಹೊರಬರುವುದು ಒಳಿತು ಎಂಬ ಅಭಿಪ್ರಾಯವನ್ನು ಪಕ್ಷದ ಒಂದು ಗುಂಪು ಮುಂದಿಟ್ಟಿತು. ಆದರೆ 27 ಸೀಟುಗಳ ಪ್ರಸ್ತಾವ ಒಪ್ಪಿಕೊಳ್ಳುವುದು ಒಳಿತು ಎಂದು ಮತ್ತೊಂದು ಗುಂಪು ಅಭಿಪ್ರಾಯಪಟ್ಟಿದೆ.

ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದರು. ‘ಎರಡೂ ಪಕ್ಷಗಳು ತಮ್ಮ ನಿಲುವಿಗೆ ಅಂಟಿಕೊಂಡಿರುವುದು ಬಿಕ್ಕಟ್ಟು ಉಂಟು ಮಾಡಿದೆ. ಮೈತ್ರಿಯಲ್ಲಿ ಪರಸ್ಪರ ಗೌರವ ಇರಬೇಕು. ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ಗುಂಡೂರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಸಿಕೆಗೆ ಆರು ಸ್ಥಾನ ಹಂಚಿಕೆ

ತಮಿಳುನಾಡು ವಿಧಾನಸಭೆಯ ಆರು ಕ್ಷೇತ್ರಗಳಲ್ಲಿ ವಿಡುಥಲೈ ಚಿರುತೈಗಳ್‌ ಕಚ್ಚಿ (ವಿಸಿಕೆ) ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮಿತ್ರಪಕ್ಷ ಡಿಎಂಕೆ ಜೊತೆಗಿನ ಸೀಟು ಹಂಚಿಕೆ ಒಪ್ಪಂದ ಅಂತಿಮವಾಗಿದೆ. 

ತನಗೆ ಕೇವಲ ಆರು ಕ್ಷೇತ್ರಗಳನ್ನು ನೀಡುತ್ತಿರುವುದಕ್ಕೆ ವಿಸಿಕೆ ಬೇಸರ ವ್ಯಕ್ತಪಡಿಸಿತ್ತು. ಆದರೆ ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟವನ್ನು ಸೋಲಿಸಲು ಡಿಎಂಕೆ ಜೊತೆ ಕೈಜೋಡಿಸುತ್ತಿರುವುದಾಗಿ ಪಕ್ಷದ ಮುಖ್ಯಸ್ಥ ಟಿ.ತಿರುಮಾವಾಲವನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು