ಗುರುವಾರ , ಸೆಪ್ಟೆಂಬರ್ 23, 2021
26 °C
ಮಹತ್ವದ ಬದಲಾವಣೆ ತರುವ ಉದ್ದೇಶ: ವಿದ್ಯುತ್‌ ಬಳಕೆದಾರರಿಗೆ ಹೆಚ್ಚು ಅವಕಾಶಗಳು

ವಿದ್ಯುತ್‌ ತಿದ್ದುಪಡಿ ಮಸೂದೆ ಶೀಘ್ರ ಸಂಪುಟದಲ್ಲಿ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್‌ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶದಿಂದ ರೂಪಿಸಲಾಗಿರುವ ‘ವಿದ್ಯುತ್‌ (ತಿದ್ದುಪಡಿ) ಮಸೂದೆ–2021’ ಅನ್ನು ಕೇಂದ್ರ ಸಚಿವ ಸಂಪುಟದ ಮಂದೆ ಶೀಘ್ರ ಮಂಡಿಸುವ ಸಾಧ್ಯತೆ ಇದೆ.

ದೂರ ಸಂಪರ್ಕ ಸೇವೆಗಳ ರೀತಿಯಲ್ಲೇ ವಿದ್ಯುತ್‌ ಒದಗಿಸುವ ಕಂಪನಿಗಳನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಲು ಈ ಮಸೂದೆಯಲ್ಲಿ ಅವಕಾಶ ಒದಗಿಸಲಾಗಿದೆ.

ಜತೆಗೆ, ವಿದ್ಯುತ್‌ ಕ್ಷೇತ್ರದಲ್ಲಿ ಸ್ಪರ್ಧೆ, ಮೇಲ್ಮನವಿ ನ್ಯಾಯಮಂಡಳಿಯನ್ನು ಬಲಪಡಿಸುವುದು (ಎಪಿಟಿಇಎಲ್‌) ಹಾಗೂ ನವೀಕರಿಸಬಹುದಾದ ವಿದ್ಯುತ್‌ ಖರೀದಿ ಒಪ‍್ಪಂದ ಪಾಲಿಸುವುದು (ಆರ್‌ಪಿಒ) ಮುಂತಾದ ಅಂಶಗಳನ್ನು ಈ ಮಸೂದೆಯು ಒಳಗೊಂಡಿದೆ. ಆರ್‌ಪಿಒ ಅನ್ವಯ ನವೀಕರಿಸಬಹುದಾದ ಇಂಧನದ ಮೂಲಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ವಿದ್ಯುತ್‌ ವಿತರಣಾ ಕಂಪನಿಗಳು ಖರೀದಿಸಬೇಕಾಗುತ್ತದೆ.

ವಿದ್ಯುತ್‌ ಬಳಕೆದಾರರ ಕರ್ತವ್ಯಗಳು ಮತ್ತು  ಹಕ್ಕುಗಳನ್ನು ಸಹ ಮಸೂದೆಯು ಒಳಗೊಂಡಿದೆ.

‘ವಿದ್ಯುತ್‌ ವಿತರಣೆಯ ಲೈಸನ್ಸ್‌ ಅನ್ನು ವಿಕೇಂದ್ರೀಕರಣಗೊಳಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಮಸೂದೆಯ ಟಿಪ್ಪಣಿಯನ್ನು ಸಂಬಂಧಿಸಿದ ಎಲ್ಲ ಸಚಿವಾಲಯಗಳಿಗೆ ಅನುಮೋದನೆಗೆ ಕಳುಹಿಸಲಾಗಿದೆ. ಕಾನೂನು ಸಚಿವಾಲಯ ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ಈ ಬಗ್ಗೆ ವಿವರಣೆ ನೀಡಲಾಗಿದೆ’ ಎಂದು ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌.ಕೆ. ಸಿಂಗ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿದೆ. ಹೀಗಾಗಿ, ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು