ಶನಿವಾರ, ಮೇ 28, 2022
30 °C

ಪ್ಲಾಸ್ಟಿಕ್ ತ್ಯಾಜ್ಯ ತಿಂದು ಎರಡು ಆನೆಗಳು ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಪೂರ್ವ ಶ್ರೀಲಂಕಾದ ತ್ಯಾಜ್ಯ ರಾಶಿಯಲ್ಲಿ ಪ್ಲಾಸ್ಟಿಕ್ ತಿಂದು ಸಾವಿಗೀಡಾದ ಆನೆಯ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಫೋಟೊ ಪೋಸ್ಟ್ ಮಾಡಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ತಿಂದ ಬಳಿಕ ಶ್ರೀಲಂಕಾದಲ್ಲಿ ಮತ್ತೆರಡು ಆನೆಗಳು ಮೃತಪಟ್ಟಿವೆ. ಈ ಚಿತ್ರ ನೋಡಿದರೆ ಹೇಗೆ ಪ್ಲಾಸ್ಟಿಕ್ ವನ್ಯಜೀವಿಗಳನ್ನು ಕೊಲ್ಲುತ್ತಿದೆ ಎನ್ನುವುದು ತಿಳಿಯುತ್ತದೆ. ಕೊಲಂಬೊದಿಂದ 130 ಮೈಲುಗಳಷ್ಟು ದೂರದ ಪಲ್ಲಕಾಡು ಜಿಲ್ಲೆಯಲ್ಲಿನ ತ್ಯಾಜ್ಯದ ರಾಶಿಯಲ್ಲಿ ಇರುವ ಆನೆಯ ಫೋಟೊ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ 20 ಆನೆಗಳು ಶ್ರೀಲಂಕಾದಲ್ಲಿ ಪ್ಲಾಸ್ಟಿಕ್ ತಿಂದು ಮೃತಪಟ್ಟಿವೆ ಎಂದು ವರದಿಗಳು ಹೇಳಿವೆ.

ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್, ಮಣ್ಣಿನಲ್ಲಿ ಕರಗದ ವಿವಿಧ ಸರಕುಗಳು ಪತ್ತೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು