ಮಂಗಳವಾರ, ಡಿಸೆಂಬರ್ 1, 2020
17 °C

ಎಲ್ಗರ್‌ ಪ್ರಕರಣ: ಜೈಲಿನಲ್ಲಿ ಸ್ಟ್ರಾ, ಸಿಪ್ಪರ್‌ ಬಳಸಲು ಸ್ವಾಮಿ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಎಲ್ಗರ್‌ ಪರಿಷತ್‌ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಾಗೂ ಮಾವೋವಾದಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಫಾದರ್‌  ಸ್ಟ್ಯಾನ್‌ ಸ್ವಾಮಿ ಅವರು ತಮಗೆ ಜೈಲಿನಲ್ಲಿ ‘ಸ್ಟ್ರಾ’ ಹಾಗೂ ‘ಸಿಪ್ಪರ್‌’ ಬಳಸಲು ಅವಕಾಶ ನೀಡಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

82 ವರ್ಷದ ಸ್ಟ್ಯಾನ್‌ ಸ್ವಾಮಿ ಈಗ ನವಿಮುಂಬೈನ ತಲೋಜ ಜೈಲಿನಲ್ಲಿದ್ದಾರೆ.

2018ರ ಜನವರಿಯಲ್ಲಿ ನಡೆದ ಪುಣೆಯ ಭೀಮಾ– ಕೋರೆಗಾಂವ್‌ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ನಲ್ಲಿ ರಾಂಚಿಯ ಅವರ ಮನೆಯಲ್ಲಿ ಬಂಧಿಸಲಾಗಿತ್ತು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು, ತಮಗೆ ಜೈಲಿನಲ್ಲಿ ‘ಸ್ಟ್ರಾ’ ಹಾಗೂ ‘ಸಿಪ್ಪರ್‌’ ಒದಗಿಸಬೇಕು ಎಂದು ತಮ್ಮ ಪರ ವಕೀಲರಾದ ಕೃತಿಕಾ ಅಗರ್‌ವಾಲ್‌ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಡಿ.ಇ. ಕೊತ್ತಲಿಕರ್‌ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ 26ರೊಳಗೆ ತಮ್ಮ ಅಭಿಪ್ರಾಯ ತಿಳಿಸಲು ರಾಷ್ಟ್ರೀಯ ತನಿಖಾ ದಳಕ್ಕೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು