ಬುಧವಾರ, ನವೆಂಬರ್ 25, 2020
25 °C

ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಉಗ್ರರು ಬಲಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಹತರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರೂ ಹುತಾತ್ಮರಾಗಿದ್ದಾರೆ.

ಗಡಿಯಿಂದ ಒಳನುಸುಳಿದ್ದರು ಎನ್ನಲಾದ ಉಗ್ರರನ್ನು ಒಯ್ಯುತ್ತಿದ್ದ ಲಾರಿಯನ್ನು ಜಮ್ಮು ಹೊರವಲಯದ ಟೋಲ್‌ ಬಳಿ ಭದ್ರತಾ ಪಡೆಗಳು ಅಡ್ಡಗಟ್ಟಿ ಪರಿಶೀಲಿಸುವಾಗ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳಿದ್ದ ಉಗ್ರರು ದೊಡ್ಡ ಪ್ರಮಾಣದ ಕೃತ್ಯ ಎಸಗಲು ಸಂಚು ನಡೆಸಿದ್ದರು ಎಂದು ಜಮ್ಮುವಿನ ಐಜಿಪಿ ಮುಕೇಶ್ ಸಿಂಗ್‌ ಹೇಳಿದರು.

ಮೂರೂವರೆ ಗಂಟೆ ಗುಂಡಿನ ಚಕಮಕಿ ನಡೆದಿದೆ. ಸ್ಥಳದಿಂದ 11 ಎ.ಕೆ.ರೈಫಲ್‌ಗಳು, 3 ಪಿಸ್ತೂಲ್‌ಗಳು, 29 ಗ್ರೆನೇಡ್‌ಗಳು, 6 ಯುಬಿಜಿಎಲ್ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು