ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆ ವಿಚಾರ: ಟಿಆರ್‌ಎಸ್‌ ಸದಸ್ಯತ್ವಕ್ಕೆ ಎಟಾಲ ರಾಜೇಂದರ್‌ ರಾಜೀನಾಮೆ

ತೆಲಂಗಾಣ– ಶಾಸಕ ಸ್ಥಾನ ತ್ಯಜಿಸಲು ಸಿದ್ಧ
Last Updated 4 ಜೂನ್ 2021, 9:14 IST
ಅಕ್ಷರ ಗಾತ್ರ

ಹೈದರಾಬಾದ್‌: ಕುಟುಂಬ ಸದಸ್ಯರ ಒಡೆತನದ ಸಂಸ್ಥೆಗಳ ಭೂಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಂಪುಟದಿಂದ ಹೊರ ಹಾಕಲಾಗಿದ್ದ ಟಿಆರ್‌ಎಸ್‌ ಹಿರಿಯ ನಾಯಕ, ಮಾಜಿ ಆರೋಗ್ಯ ಸಚಿವ ಎಟಾಲ ರಾಜೇಂದರ್‌ ಅವರು ಶುಕ್ರವಾರ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಶಾಸಕ ಸ್ಥಾನವನ್ನೂ ತ್ಯಜಿಸುವುದಾಗಿ ಹೇಳಿದ್ದಾರೆ.

‘19 ವರ್ಷಗಳ ಒಡನಾಟದ ನಂತರ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಈಗಾಗಲೇ ಹೇಳಿದಂತೆ ಮುಖ್ಯಮಂತ್ರಿಯವರು ನನ್ನನ್ನು ಸಂಪುಟದಿಂದ ಕೈಬಿಡಬೇಕಾದ ಅಗತ್ಯವಿಲ್ಲ. ನಾನೇ ನನ್ನ ಶಾಸಕ ಸ್ಥಾನವನ್ನು ತ್ಯಜಿಸುತ್ತಿದ್ದೇನೆ. ನನ್ನ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರ ಮುಂದಿನ ನಡೆಯನ್ನು ಪ್ರಕಟಿಸುತ್ತೇನೆ‘ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸರ್ಕಾರದಲ್ಲಿ ಎಲ್ಲವನ್ನೂ ಮುಖ್ಯಮಂತ್ರಿಯವರೇ ನಿಯಂತ್ರಿಸುವುದರಿಂದ ಕೆಸಿಆರ್ ಅವರ ಸಂಪುಟದಲ್ಲಿ ಯಾವುದೇ ಸಚಿವರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ‘ ಎಂದು ಅವರು ಆರೋಪಿಸಿದರು.

ರಾಜೇಂದರ್ ಅವರ ಕುಟುಂಬ ಸದಸ್ಯರ ಒಡೆತನದ ಸಂಸ್ಥೆಗಳು, ಬೇರೆಯವರಿಗೆ ನೀಡಲಾಗಿದ್ದ ಜಮೀನನ್ನು ಕಸಿದುಕೊಂಡಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಹೊರಹಾಕಲಾಗಿತ್ತು.

ರಾಜೇಂದರ್ ಅವರು ಬಿಜೆಪಿಯ ಉನ್ನತ ನಾಯಕರ ಸಂಪರ್ಕದಲ್ಲಿದ್ದರು ಮತ್ತು ಇತ್ತೀಚೆಗೆ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿತ್ತು.

ಟಿಆರ್‌ಎಸ್ ಸ್ಥಾಪನೆಯಾದಾಗಿನಿಂದ, ಪಕ್ಷದೊಂದಿಗೆ ಸಂಬಂಧವಿರಿಸಿಕೊಂಡಿದ್ದ ಕೆಲವೇ ಕೆಲವು ಹಿರಿಯ ನಾಯಕರಲ್ಲಿ ರಾಜೇಂದರ್ ಕೂಡ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT