ನವದೆಹಲಿ: ‘ವಿಸ್ತರಿತ ವಲಯ ಸಾಮರ್ಥ್ಯ’ದ ಪಿನಾಕ ರಾಕೆಟ್ ವ್ಯವಸ್ಥೆಯ (ಪಿನಾಕ–ಇಆರ್) ಪರೀಕ್ಷಾರ್ಥ ಸರಣಿ ಪ್ರಯೋಗಗಳನ್ನು ಕಳೆದ ಮೂರು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ಪೋಖರಣ್ ಪರೀಕ್ಷಾ ವಲಯದಲ್ಲಿ ಈ ರಾಕೆಟ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದೆ.

ಖಾಸಗಿ ಉದ್ದಿಮೆಯೊಂದು ಈ ರಾಕೆಟ್ ವ್ಯವಸ್ಥೆಯನ್ನು ತಯಾರಿಸಿದೆ. ರಾಕೆಟ್ ವ್ಯವಸ್ಥೆಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಖಾಸಗಿ ಉದ್ದಿಮೆವೊಂದಕ್ಕೆ ಡಿಆರ್‌ಡಿಒ ವರ್ಗಾಯಿಸಿತ್ತು.

‘ಸೇನೆಯ ಸಹಯೋಗದಲ್ಲಿ ಡಿಆರ್‌ಡಿಒ ತಜ್ಞರು ಮೂರು ದಿನಗಳ ಅವಧಿಯಲ್ಲಿ ನಡೆಸಿದ ಪರೀಕ್ಷಾರ್ಥ ಪ್ರಯೋಗಗಳ ಮೂಲಕ ಈ ರಾಕೆಟ್ ವ್ಯವಸ್ಥೆಯ ಕಾರ್ಯಕ್ಷಮತೆಯ ಮೌಲ್ಯಮಾಪನ ನಡೆಸಿದರು’ ಎಂದೂ ಸಚಿವಾಲಯ ತಿಳಿಸಿದೆ.

‘ವಿವಿಧ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ ಸಿಡಿತಲೆಗಳನ್ನು ರಾಕೆಟ್‌ಗಳಿಗೆ ಅಳವಡಿಸಲಾಗಿತ್ತು. ಎಲ್ಲ ಪರೀಕ್ಷೆಗಳ ಸಂದರ್ಭಗಳಲ್ಲಿ, ಸಿಡಿತಲೆಗಳನ್ನು ಹೊತ್ತ 24 ರಾಕೆಟ್‌ಗಳು ನಿರ್ದಿಷ್ಟ ಗುರಿ ತಲುಪಿದವು’ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಪಿನಾಕ ಎಂಕೆ–1’ ರಾಕೆಟ್ ವ್ಯವಸ್ಥೆ 40 ಕಿ.ಮೀ. ದೂರ ಚಿಮ್ಮುವ ಸಾಮರ್ಥ್ಯ ಹೊಂದಿದ್ದರೆ, ‘ಪಿನಾಕ–2’ರ ಸಾಮರ್ಥ್ಯ 60 ಕಿ.ಮೀ. ಇದೆ. ಆದರೆ, ಪಿನಾಕ–ಇಆರ್ ರಾಕೆಟ್ ವ್ಯವಸ್ಥೆ ಎಷ್ಟು ದೂರದ ವರೆಗೆ ಸಾಗಬಲ್ಲದು ಎಂಬ ಕುರಿತು ತಕ್ಷಣಕ್ಕೆ ವಿವರಗಳನ್ನು ಸಚಿವಾಲಯ ಬಿಡುಗಡೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.