ಆಲ್ಟ್ ನ್ಯೂಸ್ ದಾನಿಗಳ ಡೇಟಾವನ್ನು ಪೊಲೀಸರ ಜೊತೆ ಹಂಚಿಕೊಂಡ ರೇಜರ್ಪೇ: ಆರೋಪ

ನವದೆಹಲಿ: ತನಗೆ ದಾನ ನೀಡಿದವರ ಬಗೆಗಿನ ಡೇಟಾಗಳನ್ನು ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ ‘ರೇಜರ್ಪೇ’ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಫ್ಯಾಕ್ಟ್ಚೆಕ್ ವೆಬ್ಸೈಟ್ ‘ಆಲ್ಟ್ ನ್ಯೂಸ್’ ಆರೋಪಿಸಿದೆ.
ಆಲ್ಟ್ ನ್ಯೂಸ್ ವೆಬ್ಸೈಟ್ನ ಸಹ–ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪೊಲೀಸರ ವಶದಲ್ಲಿದ್ದಾರೆ. ಅವರು ಪಾಕಿಸ್ತಾನ ಸೇರಿದಂತೆ ಇತರ ದೇಶಗಳಿಂದ ರೇಜರ್ಪೇ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೇಜರ್ಪೇ ವಿರುದ್ಧ ಆಲ್ಟ್ ನ್ಯೂಸ್ ಆರೋಪ ಮಾಡಿದೆ.
ಇದನ್ನೂ ಓದಿ– ಧಾರ್ಮಿಕ ಭಾವನೆಗೆ ಧಕ್ಕೆ: ಪತ್ರಕರ್ತ ಜುಬೇರ್ ಪೊಲೀಸ್ ಕಸ್ಟಡಿ 4 ದಿನ ವಿಸ್ತರಣೆ
ಈ ಕುರಿತು ಟ್ವೀಟ್ ಮಾಡಿದ್ದ ಆಲ್ಟ್ ನ್ಯೂಸ್, 'ವಿದೇಶಿ ಮೂಲಗಳಿಂದ ದೇಣಿಗೆ ಸ್ವೀಕರಿಸಿದ್ದೇವೆ ಎಂದು ಆರೋಪಿಸಲಾಗಿದೆ. ಆದರೆ ನಾವು ಹಾಗೆ ಹಣ ಪಡೆಯಲು ಸಾಧ್ಯವಿಲ್ಲ. ಪೊಲೀಸರ ಆರೋಪ ಸುಳ್ಳು. ಮಹಮ್ಮದ್ ಜುಬೈರ್ ವೈಯಕ್ತಿಕ ಖಾತೆಗೂ ಹಣ ಜಮಾ ಆಗಿಲ್ಲ. ಸಂಗ್ರಹಿಸುವ ಎಲ್ಲಾ ದೇಣಿಗೆಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ' ಎಂದು ತಿಳಿಸಿತ್ತು.
Our statement on Razorpay: pic.twitter.com/8tO4xusQS8
— Alt News (@AltNews) July 5, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.